ನಾನು ಸಂಸ್ಕೃತಿಯ ಎಲ್ಲೆ ಮೀರಿ ಹೋಗಿಲ್ಲ : ಲಕ್ಷ್ಮೀ ಹೆಬ್ಬಾಳ್ಕರ್

Update: 2018-09-07 04:48 GMT

ಬೆಳಗಾವಿ, ಸೆ.7: ನಾನು ಸಂಸ್ಕೃತಿಯ ಎಲ್ಲೆ ಮೀರಿ ಹೋಗಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆ ರೀತಿ ಮಾತನಾಡುವುದು ತಪ್ಪು ಎಂದರು.

  ಆ ರೀತಿ ಮಾತನಾಡುವುದರಿಂದ ನಾವೇನು ಸಾಧಿಸುತ್ತೇವೆ. ರಾಜ್ಯದ ಜನರು  ನಮ್ಮನ್ನು ಗಮನಿಸುತ್ತಿದ್ದಾರೆ ಎಂದು  ಹೇಳಿದರು.

ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಒಪ್ಪಂದ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದು ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.

 ಲಕ್ಷ್ಮೀ ಹೆಬ್ಬಾಳ್ಕರ್ ಮನೆಯ ಸುತ್ತ ಮುತ್ತ ಖಾಕಿ ಸರ್ಪಗಾವಲು:  ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.

ಈ ನಡುವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಲಕ್ಷ್ಮೀ ಹೆಬ್ಬಾಳ್ಕರ್  ಅವರ ಬೆಳಗಾವಿಯ ಜಯನಗರದ ಕಚೇರಿಗೆ ಭೇಟಿ ನೀಡಿ ಪಿಎಲ್ ಡಿ ಬ್ಯಾಂಕ್   ನಿರ್ದೇಶಕರ ಸಭೆ ನಡೆಸಿದ್ದಾರೆ.  ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ವಿವಾದವನ್ನು ಬಗೆ ಹರಿಸುವ ಪ್ರಯತ್ನ ನಡೆಸಿದ್ದಾರೆ.  

ಸಭೆಯ ಬಳಿಕ ಪ್ರತಿಕ್ರಿಯೆ ನೀಡಿರುವ ಈಶ್ವರ್ ಖಂಡ್ರೆ  ಅವರು"ಸಮಸ್ಯೆ ಬಗೆಹರಿದಿದೆ. ಸಂಧಾನ ಸುಗಮವಾಗಿ ನಡೆದಿದೆ "ಎಂದು ತಿಳಿಸಿದರು. 

"ನಾನು ಚಿಕ್ಕವಳಾಗಿದ್ದರೂ ಪಕ್ಷದ ವರಿಷ್ಠರು ನನ್ನ ಬಳಿ  ಬಂದಿದ್ದಾರೆ.  ಎಲ್ಲವೂ ಒಳ್ಳೆಯದಾಗುತ್ತದೆ " ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News