ರಶ್ಯದೊಂದಿಗೆ ನಂಟು: ಟ್ರಂಪ್ ಮಾಜಿ ಸಹಾಯಕನಿಗೆ 14 ದಿನ ಜೈಲು

Update: 2018-09-08 16:48 GMT

ವಾಶಿಂಗ್ಟನ್, ಸೆ. 8: 2016ರ ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಪ್ರಚಾರ ತಂಡ ರಶ್ಯದೊಂದಿಗೆ ನಂಟು ಹೊಂದಿತ್ತೆ ಎಂಬ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ವಕೀಲ ರಾಬರ್ಟ್ ಮುಲ್ಲರ್‌ಗೆ ಸುಳ್ಳು ಮಾಹಿತಿ ನೀಡಿದ ಅಪರಾಧಕ್ಕಾಗಿ ಟ್ರಂಪ್ ಪ್ರಚಾರ ತಂಡದ ಮಾಜಿ ಸಲಹಾಗಾರ ಜಾರ್ಜ್ ಪಪಡೊಪೂಲಸ್‌ಗೆ ಶುಕ್ರವಾರ 14 ದಿನಗಳ ಜೈಲುವಾಸ ವಿಧಿಸಲಾಗಿದೆ.

ರಶ್ಯದ ಮಧ್ಯವರ್ತಿಗಳೊಂದಿಗೆ ತಾನು ಹೊಂದಿರುವ ಸಂಪರ್ಕಗಳ ಬಗ್ಗೆ ಎಫ್‌ಬಿಐಗೆ ಸುಳ್ಳು ಹೇಳಿರುವುದಕ್ಕಾಗಿ ತಾನು ತೀವ್ರ ಮುಜುಗರಕ್ಕೊಳಗಾಗಿದ್ದೇನೆ ಹಾಗೂ ಅದಕ್ಕಾಗಿ ನಾಚಿಕೆ ಪಡುತ್ತಿದ್ದೇನೆ ಎಂದು ಅವರು ಜಿಲ್ಲಾ ನ್ಯಾಯಾಧೀಶ ರ್ಯಾಡೊಲ್ಫ್ ಮಾಸ್‌ರಿಗೆ ಹೇಳಿದರು.

ಜಾರ್ಜ್ ಪಪಡೊಪೂಲಸ್ ರಶ್ಯ ನಂಟಿಗೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯಲ್ಲಿ ಶಿಕ್ಷೆಗೊಳಗಾಗಿರುವ ಟ್ರಂಪ್ ಪ್ರಚಾರ ತಂಡದ ಮೊದಲ ಸದಸ್ಯರಾಗಿದ್ದಾರೆ.

ಟ್ರಂಪ್ ಪ್ರಚಾರ ತಂಡದಲ್ಲಿ ವಿದೇಶ ನೀತಿ ಸಲಹಾಕಾರರಾಗಿದ್ದ ಅವರು ರಶ್ಯ ತನಿಖೆಯ ಕೇಂದ್ರ ಬಿಂದುವಾಗಿದ್ದರು.

ವಿಶೇಷ ವಕೀಲರ ಸಮ್ಮುಖದಲ್ಲಿ ಅವರು ಬಳಿಕ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News