ಬೆಂಗಳೂರು: ಖಾಸಗಿ ಕಂಪೆನಿ ಭದ್ರತಾ ಸಿಬ್ಬಂದಿಯಿಂದ ಯುವತಿಯ ಅತ್ಯಾಚಾರ

Update: 2018-09-09 13:41 GMT

ಬೆಂಗಳೂರು, ಸೆ.9: ಖಾಸಗಿ ಶಾಲೆಯೊಂದರಲ್ಲಿ ಸ್ವಚ್ಚತಾ ಕೆಲಸ(ಹೌಸ್‌ ಕೀಪಿಂಗ್) ಮಾಡುತ್ತಿದ್ದ ಯುವತಿಯ ಮೇಲೆ ಖಾಸಗಿ ಕಂಪೆನಿ ಭದ್ರತಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾನೆನ್ನಲಾದ ಘಟನೆ ಕಾಡುಬೀಸನಹಳ್ಳಿಯಲ್ಲಿ ನಡೆದಿದೆ.

ಆರೋಪಿ ಹುಸೇನ್ ಅತ್ಯಾಚಾರ ಎಸಗಿರುವ ಖಾಸಗಿ ಭದ್ರತಾ ಸಿಬ್ಬಂದಿ ಎನ್ನಲಾಗಿದೆ. ಅತ್ಯಾಚಾರಕ್ಕೆ ಈಡಾಗಿರುವ ಯುವತಿ ಅಸ್ಸಾಂ ಮೂಲದವಳಾಗಿದ್ದು, ಶಾಲೆಯ ಆವರಣದ ಮನೆಯೊಂದರಲ್ಲಿ ಒಬ್ಬಳೆ ವಾಸಿಸುತ್ತಿದ್ದಳು. ಕಳೆದ ಗುರುವಾರ ರಾತ್ರಿ ಖಾಸಗಿ ಕಂಪೆನಿಯ ಭದ್ರತಾ ಸಿಬ್ಬಂದಿ ಆಕೆಯ ಮನೆಗೆ ಏಕಾಏಕಿ ನುಗ್ಗಿ, ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯ ಪತ್ತೆಗೆ ಬಲೆಗೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News