ಸೇವಾ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವೈಫಲ್ಯ: ಜಿಯೊ,ಏರ್‌ಟೆಲ್,ವೊಡಾಪೋನ್‌ಗೆ ದಂಡ

Update: 2018-09-09 16:28 GMT

ಹೊಸದಿಲ್ಲಿ,ಸೆ.9: ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ವಿವಿಧ ಸೇವಾ ಗುಣಮಟ್ಟ ಮಾನದಂಡಗಳನ್ನು ಕಾಯ್ದುಕೊಳ್ಳುವಲ್ಲಿ ವೈಫಲ್ಯಕ್ಕಾಗಿ ರಿಲಾಯನ್ಸ್ ಜಿಯೊ,ಭಾರ್ತಿ ಏರ್‌ಟೆಲ್,ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್ ಸೇರಿದಂತೆ ಪ್ರಮುಖ ದೂರಸಂಪರ್ಕ ಕಂಪನಿಗಳಿಗೆ ಟ್ರಾಯ್ ದಂಡ ವಿಧಿಸಿದೆ ಎಂದು ವಿವಿಧ ಮೂಲಗಳು ತಿಳಿಸಿವೆ.

 ರಿಲಾಯನ್ಸ್ ಜಿಯೊ 34 ಲ.ರೂ.,ಏರ್‌ಟೆಲ್ 11 ಲ.ರೂ., ಐಡಿಯಾ 12.5ಲ.ರೂ. ಮತ್ತು ವೊಡಾಫೋನ್ 4 ಲ.ರೂ.ಗಳ ದಂಡವನ್ನು ಪಾವತಿಸಬೇಕಿವೆ.

ದೂರಸಂಪರ್ಕ ಕ್ಷೇತ್ರದಲ್ಲಿ ಸೇವಾ ಗುಣಮಟ್ಟದ ಮೇಲೆ ನಿಗಾಯಿರಿಸಿರುವ ಟ್ರಾಯ್ ತನ್ನ ನಿಯಮಾವಳಿಗಳನ್ನು ಬಿಗುಗೊಳಿಸಿದ್ದು,2017,ಅ.1ರಿಂದ ತನ್ನ ನೂತನ ಸೇವಾ ಗುಣಮಟ್ಟ ಮಾನದಂಡಗಳಿಗೆ ಬದ್ಧವಾಗಿರುವಂತೆ ಕಂಪನಿಗಳಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News