ಫೆಲೆಸ್ತೀನಿಯರ ಆರೋಗ್ಯ ರಕ್ಷಣೆ ನಿಧಿ ರದ್ದು: ಟ್ರಂಪ್ ಆದೇಶ

Update: 2018-09-09 17:10 GMT

ವಾಶಿಂಗ್ಟನ್, ಸೆ. 9: ಪೂರ್ವ ಜೆರುಸಲೇಮ್‌ನ ಆಸ್ಪತ್ರೆಗಳಲ್ಲಿ ಫೆಲೆಸ್ತೀನಿಯರ ಯೋಗಕ್ಷೇಮ ನೋಡಿಕೊಳ್ಳಲು ನಿಗದಿಪಡಿಸಲಾಗಿರುವ 25 ಮಿಲಿಯ ಡಾಲರ್ (ಸುಮಾರು 180 ಕೋಟಿ ರೂಪಾಯಿ) ಮೊತ್ತವನ್ನು ಬೇರೆ ಉದ್ದೇಶಕ್ಕೆ ನಿಗದಿಪಡಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಫೆಲೆಸ್ತೀನ್ ನಿರಾಶ್ರಿತರಿಗೆ ನೀಡಲಾಗುತ್ತಿದ್ದ ನೆರವು ಮರುಪರಿಶೀಲನೆಯ ಭಾಗವಾಗಿ ಅಧ್ಯಕ್ಷರು ಈ ಕ್ರಮ ತೆಗೆದುಕೊಂಡಿದ್ದಾರೆ.

ಫೆಲೆಸ್ತೀನಿಯರಿಗೆ ನೀಡಲಾಗುತ್ತಿರುವ ಅಮೆರಿಕ ನೆರವನ್ನು ತೆರಿಗೆದಾರರ ಹಣಕ್ಕೆ ವೌಲ್ಯ ಒದಗಿಸುವ ದೃಷ್ಟಿಯಿಂದ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಬೇರೆ ಉದ್ದೇಶಕ್ಕೆ ಬಳಸುವಂತೆ ಟ್ರಂಪ್ ಈ ವರ್ಷದ ಆದಿ ಭಾಗದಲ್ಲಿ ಸೂಚನೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News