ಸಿಪಿಇಸಿಗೆ ಪ್ರಮುಖ ಆದ್ಯತೆ: ಪಾಕ್ ಘೋಷಣೆ

Update: 2018-09-09 17:26 GMT

ಇಸ್ಲಾಮಾಬಾದ್, ಸೆ. 9: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ನೂತನ ಸರಕಾರದ ಪ್ರಮುಖ ಆದ್ಯತೆಯಾಗಿರುತ್ತದೆ ಎಂದು ಪಾಕಿಸ್ತಾನ ಶನಿವಾರ ಚೀನಾಕ್ಕೆ ಭರವಸೆ ನೀಡಿದೆ.

ಚೀನಾದ ‘ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್’ ಉತ್ತಮ ಯೋಜನೆ ಎನ್ನುವುದಕ್ಕೆ ಇದು ಸರಿಯಾದ ಉದಾಹರಣೆಯಾಗಿದೆ ಎಂದು ಅದು ಹೇಳಿದೆ.

‘‘ಎಲ್ಲರ ಸಹಕಾರದೊಂದಿಗೆ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ ಅತ್ಯಂತ ಸುಗಮ ಯೋಜನೆಯಾಗಬಹುದು ಎನ್ನುವುದಕ್ಕೆ ಸಿಪಿಇಸಿ ಅತ್ಯುತ್ತಮ ಸಾಕ್ಷಿಯಾಗಿದೆ’’ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹಮೂದ್ ಖುರೇಶಿ ಹೇಳಿದರು.

ಪಾಕಿಸ್ತಾನಕ್ಕೆ ಭೇಟಿ ನೀಡಿರುವ ವಿದೇಶ ಸಚಿವ ವಾಂಗ್ ಯಿ ಜೊತೆ ಅವರು ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಂಗ್ ಯಿ, ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವನ್ನು ಸಮರ್ಥಿಸಿಕೊಂಡರು ಹಾಗೂ ಯೋಜನೆಯು ಪಾಕಿಸ್ತಾನದ ಮೇಲೆ ದೊಡ್ಡ ಸಾಲದ ಹೊರೆಯನ್ನು ಹೇರುತ್ತಿದೆ ಎಂಬ ಟೀಕೆಗಳನ್ನು ತಳ್ಳಿಹಾಕಿದರು.

‘‘ಸಿಪಿಇಸಿಯು ಪಾಕಿಸ್ತಾನದ ಮೇಲೆ ಸಾಲದ ಹೊರೆಯನ್ನು ಹೊರಿಸಿಲ್ಲ. ಬದಲಿಗೆ, ಈ ಯೋಜನೆ ಪೂರ್ಣಗೊಂಡಾಗ ಹಾಗೂ ಚಾಲನೆಗೊಂಡಾಗ ಅದು ಭಾರೀ ಆರ್ಥಿಕ ಪ್ರಯೋಜನಗಳನ್ನು ಒದಗಿಸಲಿದೆ ಹಾಗೂ ಇದು ಪಾಕಿಸ್ತಾನಿ ಆರ್ಥಿಕತೆಗೆ ಗಣನೀಯ ಆದಾಯವನ್ನು ನೀಡಲಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News