​ ಭಾರತ್ ಬಂದ್: ಸಕಲೇಶಪುರದಲ್ಲಿ ಪ್ರತಿಭಟನೆ

Update: 2018-09-10 08:03 GMT

ಸಕಲೇಶಪುರ, ಸೆ.10: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆಯಲ್ಲಿ ಸಕಲೇಶಪುರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಜೊತೆಯಾಗಿ ಪ್ರತಿಭಟನೆ ನಡೆಸಿದವು.

ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ವಾಹನಕ್ಕೆ ಹಗ್ಗ ಕಟ್ಟಿ ಎಳೆಯುತ್ತಾ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಹಳೇ ಬಸ್‌ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಪ್ರತಿಭಟನಾ ಸಭೆ ನಡೆಸಿದರು.

ಪ್ರತಿಭಟನೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ವಿವಿಧ ಪಕ್ಷದ ಮುಖಂಡರುಗಳು ಮಾತನಾಡಿದರು. ಬಳಿಕ ಉಪಾವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ್‌ರೆಡ್ಡಿಯವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಸಿದ್ದಯ್ಯ , ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಾನುಬಾಳು ಭಾಸ್ಕರ್, ಜಿಪಂ ಮಾಜಿ ಸದಸ್ಯ ಬೈರ್‌ಮುಡಿ ಚಂದ್ರು, ವೈ.ಪಿ.ರಾಜೇಗೌಡ, ಕೊಲ್ಲಹಳ್ಳಿ ಸಲೀಂ, ತಾಪಂ ಉಪಾಧ್ಯಕ್ಷ ಉದಯ್, ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡದೀಣೆಸ್ವಾಮಿ, ಜೆಡಿಎಸ್ ಮುಖಂಡರಾದ ಬೆಕ್ಕಿನಹಳ್ಳಿ ನಾಗರಾಜು, ಸಚ್ಚಿನ್ ಪ್ರಸಾದ್, ಪುಟ್ಟಸ್ವಾಮಿ, ಬಿಎಸ್.ಪಿ.ವೇಣುಕುಮಾರ್, ಎಸ್‌ಡಿಪಿಐ ಮುಖಂಡ ಇರ್ಫಾನ್‌ಖಾನ್, ಕಮೂನಿಸ್ಟ್ ಪಾರ್ಟಿ ಮುಖಂಡ ಸಂತೋಷ್, ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಲ್ನಾಡ್ ಮಹಬೂಬ್, ದಸಂಸ ಸಂಘದ ಮುಖಂಡರಾದ ಹೆತ್ತೂರು ಅಣ್ಣಯ್ಯ ನಾಗರ ರಮೇಶ, ಕರುನಾಡು ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಮಲೆನಾಡು ಆಟೋ ಸಂಘದ ಉಪಾಧ್ಯಕ್ಷ ಸುನೀಲ್, ಮಿನಿ ಗೂಡ್ಸ್ ಚಾಲಕರ ಸಂಘದ ಮುಖಂಡರು ಲತೀಫ್, ಝುಬೈರ್, ಲಾರಿ ಚಾಲಕರ ಸಂಘದ ನಂದಿಕೃಪರಾಜು, ಭಾಸ್ಕರ್, ಕಾರು ಚಾಲಕರ ಸಂಘದ ಅಧ್ಯಕ್ಷ ಕುಮಾರ್, ಸಿಐಟಿಯು ಮುಖಂಡ ಹರೀಶ್, ಟಿಪ್ಪುಸುಲ್ತಾನ್ ಯುವಕರ ಸಂಘದ ಸದತ್ ಅಲಿ, ಕರ್ನಾಟಕ ರಕ್ಷಣಾ ವೇದಿಕೆಯಅಧ್ಯಕ್ಷ ದಿನೇಶ್, ಪುರಸಭಾ ಸದಸ್ಯರಾದ ಆಟೋ ಅಣ್ಣಪ್ಪ, ಝರೀನಾ ಬಾನು, ಕಾಂಗ್ರೆಸ್ ಎಸ್.ಇ.ಎಸ್.ಟಿ. ಅಧ್ಯಕ್ಷ ವೆಂಕಟೇಶ್, ಆಟೋ ಸಂಘದ ಮಾಜಿ ಅಧ್ಯಕ್ಷ ದೇವರಾಜ್ ಭುವನಾಕ್ಷ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News