ಅಂತಿಮ ಟೆಸ್ಟ್ : ಜೋ ರೂಟ್ 14ನೇ ಶತಕ

Update: 2018-09-10 13:22 GMT

ಲಂಡನ್, ಸೆ.10: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್ ಟೀಮ್ ಇಂಡಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಶತಕ ದಾಖಲಿಸಿದರು.

 ರವಿವಾರ ಮೂರನೇ ದಿನದಾಟದಂತ್ಯಕ್ಕೆ ಮಾಜಿ ನಾಯಕ ಅಲಿಸ್ಟೈರ್ ಕುಕ್ ಜೊತೆ 29 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ರೂಟ್ 151 ಎಸೆತಗಳಲ್ಲಿ 11ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಸೋಮವಾರ  ಶತಕ ಪೂರ್ಣಗೊಳಿಸಿದರು.

 ರೂಟ್ ತನ್ನ 74ನೇ ಟೆಸ್ಟ್‌ನಲ್ಲಿ 14ನೇ ಶತಕ ಗಳಿಸಿದರು. ವಿದಾಯದ ಟೆಸ್ಟ್ ಆಡುತ್ತಿರುವ ಕುಕ್ ಶತಕ ಬಾರಿಸಿದ್ದಾರೆ. ,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News