ಹನೂರು: ಗಾಳಿ ಮಳೆಗೆ ಉರುಳಿದ ಮರ; ಎಮ್ಮೆ ಸಾವು

Update: 2018-09-10 13:57 GMT

ಹನೂರು,ಸೆ.10: ಗಾಳಿ ಮಳೆ ಅಬ್ಬರಕ್ಕೆ ಮರ ಉರುಳಿದ ಪರಿಣಾಮ ಎಮ್ಮೆಯೊಂದು ಸಾವನ್ನಪ್ಪಿ ಮತ್ತೊಂದು ಎಮ್ಮೆಗೆ ಗಂಭೀರ ಗಾಯವಾಗಿರುವ ಘಟನೆ ಹನೂರು ಸಮೀಪದ ಹಲಗಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ: ಹಲಗಾಪುರ ಗ್ರಾಮದ ಕುರುಬರಬೀದಿಯಲ್ಲಿ ನಾಗರಾಜು ಎಂಬವರಿಗೆ ಸೇರಿದ ಎರಡು ಎಮ್ಮೆಗಳನ್ನು ಮರದ ಹತ್ತಿರ ಕಟ್ಟಿಹಾಕಲಾಗಿತ್ತು. ಮದ್ಯಾಹ್ನದ ನಂತರ ಸುರಿದ ಭಾರೀ ಗಾಳಿ ಮಳೆಯ ಅಬ್ಬರಕ್ಕೆ ಮರ ಉರುಳಿದ ಪರಿಣಾಮ ಒಂದು ಎಮ್ಮೆ ಸ್ಥಳದಲ್ಲಿ ಸಾವನ್ನಪ್ಪಿ, ಮತ್ತೊಂದು ಎಮ್ಮೆಗೆ ಗಂಭೀರ ಗಾಯಗಳಾಗಿದೆ. 

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ನೆರವು ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News