ಮತ್ತೆ ಏರಿದ ಪೆಟ್ರೋಲ್ ಬೆಲೆ: ಸುಂಕ ಕಡಿಮೆ ಮಾಡಲು ಕೇಂದ್ರ, ರಾಜ್ಯ ಸರಕಾರಗಳು ನಕಾರ

Update: 2018-09-10 15:56 GMT

ಹೊಸದಿಲ್ಲಿ, ಸೆ.10: ಸೋಮವಾರ ದಿಲ್ಲಿಯಲ್ಲಿ ಪೆಟ್ರೋಲ್ ದರ ಸಾರ್ವಕಾಲಿಕ ದಾಖಲೆಯ 80.73 ರೂ. ಪ್ರತಿ ಲೀಟರ್ ತಲುಪಿದರೆ ಡೀಸೆಲ್ 72.83 ರೂ. ಪ್ರತಿ ಲೀಟರ್‌ಗೆ ಏರಿದೆ.

 ಈ ಮಧ್ಯೆ ತೈಲದ ಮೇಲಿನ ಸುಂಕವನ್ನು ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಿದ್ಧವಿಲ್ಲ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ.

ಕೇಂದ್ರ ಸರಕಾರ ಅಬಕಾರಿ ಸುಂಕ ಕಡಿಮೆ ಮಾಡಿದರೆ ವಿತ್ತೀಯ ಕೊರತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಬಿಹಾರ, ಕೇರಳ ಹಾಗೂ ಪಂಜಾಬ್‌ನಂಥ ರಾಜ್ಯಗಳು ಮಾರಾಟ ತೆರಿಗೆಯನ್ನು ಇಳಿಕೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ವರದಿ ತಿಳಿಸಿದೆ.

ರವಿವಾರದಂದು ರಾಜಸ್ಥಾನ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್‌ನಲ್ಲಿ ಶೇ.4 ಕಡಿತಗೊಳಿಸಿದ್ದರೆ ಆಂಧ್ರ ಪ್ರದೇಶ ಸರಕಾರ ತೈಲಬೆಲೆಯಲ್ಲಿ 2 ರೂ. ಕಡಿತಗೊಳಿಸಿರುವುದಾಗಿ ಸೋಮವಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News