ಬಾಗೇಪಲ್ಲಿ: ಭಾರತ್ ಬಂದ್ ಸಂಪೂರ್ಣ ಯಶಸ್ವಿ

Update: 2018-09-10 18:21 GMT

ಬಾಗೇಪಲ್ಲಿ,ಸೆ.10: ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸಿಪಿಐಂ, ಜೆಡಿಎಸ್ ಪಕ್ಷಗಳು ಮತ್ತು ದಲಿತ ಪರ  ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕರೆ ಕೊಟ್ಟಿದ್ದ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಪಟ್ಟಣದ ಮುಖ್ಯರಸ್ತೆಯಲ್ಲಿ ಟಿ.ಬಿ ಕ್ರಾಸ್ ವರೆಗೂ ಬೈಕ್ ರ್ಯಾಲಿ ನಡೆಸಿದರು. ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯ ಪ್ರತಿಕೃತಿ ದಹಿಸಿ ಪ್ರತಿಭಟಿಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.

ಈ ಸಂರ್ಭ ಬ್ಲಾಕ್ ಕಾಂಗ್ರೆಸ್ ಎಚ್.ಎಸ್.ನರೇಂದ್ರ ಮಾತನಾಡಿ, ಪ್ರಧಾನಿ ಮೋದಿರವರು ದೇಶದಲ್ಲಿ ಅಚ್ಛೇದಿನ್ ಬರುತ್ತದೆ ಎಂದು ಹೇಳಿ, ಜನರಿಗೆ ಮಕ್ಮಲ್ ಟೋಪಿ ಹಾಕಿ ಹಂತ ಹಂತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಏರಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಇದೇನಾ ಅಚ್ಚೇದಿನ್ ? ಕೂಡಲೇ ತೈಲ ಬೆಲೆ ಇಳಿಸದಿದ್ದರೆ ಇನ್ನೂ ಉಗ್ರ ಹೋರಾಟ ಮಾಡಲಾಗುವುದು ಎಂದರು. 

ಪಟ್ಟಣದಲ್ಲಿ ಮುಖ್ಯರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ, ಖಾಸಗಿ ವಾಹನಗಳು ರಸ್ತೆಗೆ ಇಳಿಯದಿರುವುರಿಂದ ಪ್ರಯಾಣಿಕರಿಗೆ ತೊಂದರೆಯಾಯಿತು, ಇನ್ನು ಪಟ್ಟಣದಲ್ಲಿ ಅಂಗಡಿಮುಂಗಟ್ಟುಗಳು, ಚಲನಚಿತ್ರ ಮಂದಿರಗಳು, ಸರ್ಕಾರಿ, ಶಾಸಗಿ ಕಚೇರಿಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.  

ಸಿಪಿಎಂನಿಂದ ಪ್ರತ್ಯೇಕ ಪ್ರತಿಭಟನೆ: ತಾಲೂಕು ಸಮಿತಿ ನೇತೃತ್ವದಲ್ಲಿ ಸಿಪಿಎಂ ಕಾರ್ಯಕರ್ತರು ಪಟ್ಟಣದ ಸುಂದರಯ್ಯ ಭವನದಿಂದ ಟಿ.ಬಿ.ಕ್ರಾಸ್, ಡಾ.ಎಚ್.ಎನ್.ವೃತ್ತದವರಿಗೂ ಬೈಕ್ ರ್ಯಾಲಿ ನಡೆಸಿ ರಸ್ತೆ ನಿಲ್ದಾಣದಲ್ಲಿ ಮಾನವ ಸರಪಳಿ ನಡೆಸಿ ಪ್ರತಿಭಟನೆ ನಡೆಸಿದರು. 

ಈ ವೇಳೆ ಮುಖಂಡರಾದ ಜೆಸಿಬಿ ಮಂಜುನಾಥರೆಡ್ಡಿ, ಶ್ರೀರಾಮನಾಯ್ಕ, ಚಂದ್ರಶೇಖರೆಡ್ಡಿ, ಅಶ್ವತ್ತಪ್ಪ, ಶಂಕರ, ಹೇಮಚಂದ್ರ, ಮಹಮದ್ ಅಕ್ರಂ ಮತ್ತಿತರರು ಭಾಗವಹಿಸಿದ್ದರು.

ಜೆಡಿಎಸ್ ನಿಂದ ಪ್ರತಿಭಟನೆ: ಭಾರತ್ ಬಂದ್‍ಗೆ ಬೆಂಬಲಿಸಿ ಪಟ್ಟಣದಲ್ಲಿ ಜೆಡಿಎಸ್ ಮುಖಂಡರು ಮುಖ್ಯರಸ್ತೆಯಲ್ಲಿ ಪ್ರತ್ಯೇಕವಾಗಿ ಬೈಕ್ ರ್ಯಾಲಿ ನಡೆಸಿ ಪೆಟ್ರೋಲ್, ಡೀಸೆಲ್ ಏರಿಕೆ ಕ್ರಮದ ವಿರುದ್ಧ ಪ್ರತಿಭಟಿಸಿದರು. ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶಿ ಬಿ.ಆರ್.ನರಸಿಂಹನಾಯ್ಡು, ಮುಖಂಡ ಸಿ.ಡಿ.ಗಂಗುಲಪ್ಪ, ಮಹಮದ್ ಎಸ್‍ನೂರುಲ್ಲಾ ಭಾನುಪ್ರಸಾದ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಿ.ವಿ.ವೆಂಕಟರವಣ, ಮಹಿಳಾ ಕಾಂಗ್ರೆಸ್ ಮುಖಂಡರಾದ ಗುಲ್ಜಾಜ್ ಬೇಗಂ, ಟಿ.ವಿ.ಸುಮಂಗಳಾ, ನಾಜೀರಾಬೇಗಂ ವಿಮಲ, ಜಬೀವುಲ್ಲಾ ಖಾನ್, ಡಾಬಾರಾಮಚಂದ್ರ, ಮುಜೀಬ್, ದೇವಿಕುಂಟೆಆನಂದ್, ಶಿವಾರೆಡ್ಡಿ, ಅನ್ಸರ್, ಮನ್ಸೂರ್, ಅಬ್ದುಲ್ ಮಜೀಬ್, ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಬಿ.ಟಿ.ಸೀನಾ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.  

ತಾಲೂಕಿನಲ್ಲಿ ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಆರಕ್ಷಕ ವೃತ್ತ ನಿರೀಕ್ಷಕ ಗೋವಿಂದರಾಜು ಉಪ ನಿರಿಕ್ಷಕ ನವೀನ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News