ಸಿಂಧೂ ಕಣಿವೆ ನಾಗರಿಕತೆಯ ಜನರ ಬಗ್ಗೆ ಹಿಂದುತ್ವ ಯಾಕೆ ಅಸಮಾಧಾನಗೊಂಡಿದೆ?

Update: 2018-09-10 18:41 GMT

ಹಿಂದೂ ಬಲಪಂಥೀಯರ ಗುಂಪಿಗೆ ಸೇರಿದ ಕೆಲವು ಬುದ್ಧಿಜೀವಿಗಳು ಹಿಂದುತ್ವ ಇತಿಹಾಸವನ್ನು ಅನುವಂಶೀಯ, ಪ್ರಾಚ್ಯ ಶಾಸ್ತ್ರೀಯ ಮತ್ತು ಭಾಷಾವೈಜ್ಞಾನಿಕ (ಲಿಂಗ್ವಿಸ್ಟಿಕ್) ಪುರಾವೆಯೊಂದಿಗೆ ಹೊಂದಿಸಲು ಪ್ರಯತ್ನಿಸಿದ್ದಾರೆ. ಅವರು, ನಾನು ಹೇಳಿರುವ ವಲಸೆ ಕಥಾನಕದ ವಿರುದ್ಧ ಎರಡು ವಾದಗಳನ್ನು ಮಂಡಿಸುತ್ತಾರೆ.


ಮೆಕ್ರೊಮೊಸೋಮ್ ಡಿಎನ್‌ಎ ಹ್ಯಾಪ್ಲೊಗ್ರೂಪ್‌ಗಳಲ್ಲಿ ವಂಶವಾಹಿ ವಿಜ್ಞಾನಿಗಳು ಮತ್ತು ವಿದ್ವಾಂಸರು ಮಾತ್ರ ಆಸಕ್ತರೆಂದು ನೀವು ತಿಳಿಯಬಹುದು. ಆದರೆ ಆರ್1ಎ ಎಂದು ಕರೆಯಲಾಗುವ ಅಂತಹ ಒಂದು ಹ್ಯಾಪ್ಲೊಗ್ರೂಪ್ ಈಗ ಭಾರತದ ಪ್ರಾಚೀನ ಇತಿಹಾಸದ ಕುರಿತಾದ ಚರ್ಚೆಯ ಒಂದು ಅವಿಭಾಜ್ಯ ಅಂಗವಾಗಿದೆ. ಈ ಗ್ರೂಪ್ ಒಂದು ಏಕರೂಪಿ ಪುರುಷ ಸಂತತಿಯಿಂದ ಮುಂದುವರಿದ ಜನಾಂಗವೊಂದನ್ನು ಸೂಚಿಸುತ್ತದೆ. ಇಂದಿನ ಹರ್ಯಾಣದ ರಾಖಿಘರ್ಹಿ ಎಂಬಲ್ಲಿ ಸುಮಾರು 4,500 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬ ಈ ಆರ್1ಎ ವಿವಾದದಲ್ಲಿ ತಳಕು ಹಾಕಿಕೊಂಡಿದ್ದಾನೆ. ಆ ವ್ಯಕ್ತಿಯ ಅನುವಂಶೀಯ ಪ್ರಕಟವಾಗಿದೆ. ಸಂಶೋಧಕರಿಗೆ ಆ ವ್ಯಕ್ತಿಯಲ್ಲಿ ಆರ್1ಎ ಕಂಡುಬರಲಿಲ್ಲ ಎಂಬುದೇ ಈಗ ಮುಖ್ಯವಾಗಿರುವ ವಿಷಯ.

 ಒಂದು ವೇಳೆ ಅದು ಆ ವ್ಯಕ್ತಿಯಲ್ಲಿ ಕಂಡುಬಂದಿದ್ದಲ್ಲಿ ಹಿಂದುತ್ವವಾದಿಗಳು ಸಿಂಧೂ ಕಣಿವೆ ನಾಗರಿಕತೆಯ ಜನರು ವೇದಗಳ ಕಾಲದ ಜನರೇ ಎಂಬ ತಮ್ಮ ನಂಬಿಕೆ ರುಜುವಾಯಿತೆಂದು ಸಂತೋಷದಿಂದ ಸಂಭ್ರಮಿಸುತ್ತಿದ್ದರು. ಹರಪ್ಪ ಮೊಹೆಂಜದಾರೊದಂತಹ ಪ್ರಾಚೀನ ಪಟ್ಟಣಗಳ ನಿವಾಸಿಗಳು ಹಿಂದೂ ದೇವತೆಗಳನ್ನು ಪೂಜಿಸುತ್ತಿದ್ದರು ಮತ್ತು ಆ ಸಂಸ್ಕೃತಿಯನ್ನು ಸಿಂಧೂ -ಸರಸ್ವತಿ ನಾಗರಿಕತೆ ಎಂದು ಕರೆಯಬೇಕೆಂಬ ತಮ್ಮ ವಾದ ಸರಿ ಎಂದು ಸಂತಸಗೊಳ್ಳುತ್ತಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅವರು ವಿರೋಧಿಸುವ ವಾದ ಸಂಶೋಧನೆಯಿಂದ ತಿಳಿದುಬಂದಿದೆ. ಹಿಂದೂ ಕಣಿವೆ ನಾಗರಿಕತೆಯ ಉತ್ತುಂಗಕಾಲದ ಬಹಳ ನಂತರ, ಹೆಚ್ಚೆಂದರೆ 4,000 ವರ್ಷಗಳ ಹಿಂದೆ, ಭಾರತೀಯ ಉಪಖಂಡಕ್ಕೆ ವಲಸೆ ಬಂದ ಒಂದು ಸಮುದಾಯದ ಜನರಿಂದ ವೇದಗಳು ರಚಿಸಲ್ಪಟ್ಟವು.

ಭಾರತದ ಕತೆ:
ಲಭ್ಯ ಸಾಕ್ಷಗಳ ಪ್ರಕಾರ ಸುಮಾರು 70,000 ವರ್ಷಗಳ ಹಿಂದೆ ದೇಹ ಶಾಸ್ತ್ರೀಯವಾಗಿ ಆಧುನಿಕರಾದ ಮಾನವರು ಆಫ್ರಿಕಾದಿಂದ ತಂಡ ತಂಡಗಳಾಗಿ ಭಾರತಕ್ಕೆ ವಲಸೆ ಹೊರಡಲಾರಂಭಿಸಿದರು.

ಸುಮಾರು 10,000 ವರ್ಷಗಳ ಹಿಂದೆ ಮಾನವರು ಗೋಧಿ ಮತ್ತು ಬಾರ್ಲಿಯನ್ನು ಬೆಳೆಸುವುದು ಹೇಗೆಂದು ಕಲಿತರು. ಮತ್ತು ಜಾನುವಾರು, ಆಡು, ಕುರಿ, ಹಂದಿಗಳನ್ನು ಸಾಕು ಪ್ರಾಣಿಗಳಾಗಿ ಪಳಗಿಸಿದರು. ಭತ್ತದ ಬೇಸಾಯ ಪೂರ್ವದಿಂದ ಭಾರತಕ್ಕೆ ಬಂತು. ಬೇಸಾಯ ಬಂದ ಬಳಿಕ, ಹರಪ್ಪ ಮತ್ತು ಧೊಲಾವಿರದಂತಹ ಪಟ್ಟಣಗಳನ್ನು ಬೆಂಬಲಿಸಲು ಸಾಕಾಗುವಷ್ಟು ದೊಡ್ಡದಾಗುವವರೆಗೆ ಉತ್ತರ ಭಾರತದ ಅರ್ಥವ್ಯವಸ್ಥೆ ನಿಧಾನವಾಗಿ ಬೆಳೆಯಿತು. ಈ ಪಟ್ಟಣಗಳ ಜನರು ಎರಡು ತಂಡಗಳ ಒಂದು ಮಿಶ್ರಣವಾಗಿದ್ದರು. ಆಫ್ರಿಕಾದಿಂದ ವಲಸೆ ಹೊರಟ ಜನರ ಸಂತತಿಗೆ ಸೇರಿದ ಸ್ವದೇಶಿ ಬೇಟೆಗಾರ ಸಂಗ್ರಾಹಕರು ಮತ್ತು ಅವರಿಗಿಂತ ಬಹಳ ಮುಂದಿನವರಾದ ಬೇಸಾಯಗಾರರು.

5,000 ವರ್ಷಗಳ ಹಿಂದಿನ ಹರಪ್ಪಯುಗದ ನಾಲ್ಕು ಮಾನವ ಅಸ್ಥಿಪಂಜರ ಗಳು ಪತ್ತೆಯಾಗಿವೆ. ( 2015ರ ಮಾರ್ಚ್ 11ರಂದು ರಾಖಿಘರ್ಹಿ ಹಳ್ಳಿಯ ಒಂದು ದಫನ ಭೂಮಿಯಲ್ಲಿ) ಎಂಬುದನ್ನು ಇಲ್ಲಿ ಗಮನಿಸಬಹುದು. ಸಮತಲ ಭೂಮಿಯಯ ಹೊರಗೆ 6,000 ವರ್ಷಗಳ ಹಿಂದೆ ಕಪ್ಪು ಸಮುದ್ರದ ಉತ್ತರಕ್ಕಿರುವ ಹುಲ್ಲುಗಾವಲು ಪ್ರದೇಶಗಳಿಂದ ಒಂದು ಹೊಸ ವಲಸೆ ಆರಂಭವಾಯಿತು. ಕುದುರೆ ಸವಾರಿಯ ಶೋಧನೆಯಿಂದಾಗಿ ಸಾಧ್ಯವಾದ ವಲಸೆ ಇದು. ಆ ಪ್ರದೇಶ ಗಳ ಕುದುರೆ ಜನರು ಅಭೇದ್ಯ ಶಸ್ತ್ರ ಸೈನಿಕರಾದರು, ವಾರಿಯರ್ಸ್‌ ಆದರು. ಸಮತಲ ಭೂಮಿಯ ಹುಲ್ಲುಗಾವಲು ಪ್ರದೇಶ (ಸ್ಟೆಪ್ಪ್)ದಿಂದ ಹೊರ ಹೋಗಲಾರಂಭಿಸಿದ ಅವರು ಆಧುನಿಕ ಜಗತ್ತಿಗೆ ಅವರ ಅತ್ಯಂತ ದೊಡ್ಡ ಕೊಡುಗೆಯಾದ ತಮ್ಮ ಭಾಷೆಯನ್ನು ಹರಡಿದರು. ಅದೇ ಗ್ರೀಕ್, ಲ್ಯಾಟಿನ್, ಪ್ರಾಚೀನ ಇರಾನಿಯನ್ ಭಾಷೆಗಳ ಪೂರ್ಮಿಕವಾದ ಈಗ ಇಂಡೋ- ಯುರೋಪಿಯನ್ ಭಾಷಾ ಕುಟುಂಬವೆಂದು ಕರೆಯಲಾಗುತ್ತಿರುವ ಭಾಷೆ. ಆ ಸ್ಟೆಪ್ಪ್ ವಂಶವಾಹಿಗಳು ಮೂಲತಃ ಪುರುಷರಿಂದ ರವಾನೆಯಾದವುಗಳು. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಆರ್ 1ಎ ಹ್ಯಾಪ್ಸೊಗ್ರೂಪ್. ಸಿಂಧೂ ಕಣಿವೆ ನಾಗರಿಕತೆ ಅವನತಿಯ ಸ್ಥಿತಿಯಲ್ಲಿದ್ದಾಗ ಸ್ಟೆಪ್ಪ್ಸ್‌ಗಳಲ್ಲಿ ಆರಂಭವಾದ ಒಂದು ವಲಸೆ ಯು ಸಂಸ್ಕೃತವನ್ನು ಭಾರತಕ್ಕೆ ತಂದಿತು ಎಂಬ ವಾದವನ್ನು ಇದು ತಳ್ಳಿಹಾಕುತ್ತದೆ.

ರಾಖಿಘರ್ಹಿಯ ಮನುಷ್ಯ ಅನುವಂಶೀಯವಾಗಿ ತಮಿಳ್ನಾಡು ಮತ್ತು ಕೇರಳಗಳಲ್ಲಿ ವಾಸವಾಗಿರುವ ಒಂದು ಆದಿವಾಸಿ ತಂಡವಾದ ಇರುಳಾ ಸಮುದಾಯದ ಸದಸ್ಯರಿಗೆ ಸಮೀಪದವನೆಂದು ತಿಳಿದು ಬಂದಿದೆ. ಆತನ ಸಾಂಪ್ರದಾಯಿಕ ವೃತ್ತಿ ಇಲಿಗಳನ್ನು ಹಾಗೂ ಹಾವುಗಳನ್ನು ಹಿಡಿಯುವುದು. ಸಿಂಧೂ ನದಿ ಕಣಿವೆಯ ಜನರು ಒಂದು ದ್ರಾವಿಡ ಮೂಲದ ಭಾಷೆಯನ್ನು ಮಾತನಾಡುತ್ತಿದ್ದರು ಎಂಬ ಊಹೆಯನ್ನು ಇದು ಬಲಪಡಿಸುತ್ತದೆ. ಇಂದಿನ ಉತ್ತರ ಭಾರತೀಯರ ಒಂದು ದೊಡ್ಡ ಪ್ರತಿಶತ ಜನರು ‘‘ಸ್ಟೆಪ್ಪ್ ವಂಶವಾಹಿಗಳನ್ನು ಹೊಂದಿದ್ದಾರೆ ಮತ್ತು ಆದಿವಾಸಿಗಳೂ ಸೇರಿದಂತೆ ನಿಜವಾಗಿ ಎಲ್ಲ ಭಾರತೀಯರು’’ ಬೇಸಾಯಗಾರ ವಂಶವಾಹಿಗಳನ್ನು ಹೊಂದಿದ್ದಾರೆ. ಹಿಂದುತ್ವವಾದಿಗಳ ಅಭಿಪ್ರಾಯ

 ಹಿಂದೂ ಬಲಪಂಥೀಯರ ಗುಂಪಿಗೆ ಸೇರಿದ ಕೆಲವು ಬುದ್ಧಿಜೀವಿಗಳು ಹಿಂದುತ್ವ ಇತಿಹಾಸವನ್ನು ಅನುವಂಶೀಯ, ಪ್ರಾಚ್ಯ ಶಾಸ್ತ್ರೀಯ ಮತ್ತು ಭಾಷಾವೈಜ್ಞಾನಿಕ(ಅಂಗ್ವಿಸ್ಟಿಕ್) ಪುರಾವೆಯೊಂದಿಗೆ ಹೊಂದಿಸಲು ಪ್ರಯತ್ನಿಸಿದ್ದಾರೆ. ಅವರು, ನಾನು ಹೇಳಿರುವ ವಲಸೆ ಕಥಾನಕದ ವಿರುದ್ಧ ಎರಡು ವಾದಗಳನ್ನು ಮಂಡಿಸುತ್ತಾರೆ. ನನ್ನ ವಾದವನ್ನು ಅವರು ಜನಾಂಗವಾದಿ(ಶೀಸಿಸ್ಟ್) ಎಂದು ವಿರೋಧಿಸುತ್ತಾರೆ ಮತ್ತು ನಮ್ಮ ಬಳಿ ವಲಸೆಗಳ ಪುರಾವೆಗಳು ಮಾತ್ರ ಇವೆ; ಆದರೆ, ಆ ವಲಸೆಗಳು ಯಾವ ದಿಕ್ಕಿನಲ್ಲಿ ಪಡೆದವು ಎಂಬ ಬಗ್ಗೆ ಪುರಾವೆಗಳಿಲ್ಲ ಎಂದು ವಾದಿಸುತ್ತಾರೆ. ಹಿಂದುತ್ವ ಅಭಿಪ್ರಾಯದ ಪ್ರಕಾರ, ಭಾರತೀಯ ಕುದುರೆ ಸವಾರರು ಸ್ಟೆಪ್ಟ್ ಗಳಿಗೆ ವಲಸೆ ಹೋದರು; ಹೋಗುವಾಗ ತಮ್ಮ ಜೊತೆ ಆರ್1ಎ ಮತ್ತು ಇಂಡೋ-ಯುರೋಪಿಯನ್ ಭಾಷೆಗಳ ತಾಯಿಯನ್ನು ಕೊಂಡುಹೋದರು.

ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್, ಈ ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ್ದಾರೆ.‘‘ಏಶ್ಯಾದಲ್ಲಿ ಅತ್ಯಂತ ಪೂರ್ವದಲ್ಲಿ ದೊರಕುವ ಕುದುರೆಗಳ ಪುರಾವೆಯು ಮಧ್ಯ ಏಶ್ಯಾದಿಂದ ಅಲ್ಲ; ಅರೇಬಿಯಾದ ಮಧ್ಯಭಾಗದಿಂದ ದೊರಕಿದೆ ಎಂದು ಕಮೆಂಟ್ ಹಾಕಿದ್ದಾರೆ. ‘‘ಸೈಪ್ಪ್‌ಗಳಿಗಿಂತ ತುಂಬ ಮೊದಲು ಇದ್ದ ಕುದುರೆಗಳು 10,000 ವರ್ಷ ಹಳೆಯದಾದ ಗುಹಾ ಚಿತ್ರಗಳಲ್ಲಿ ಇವೆ. ಆದ್ದರಿಂದ, ಕುದುರೆ ಕೂಡ ‘ದಕ್ಷಿಣದ’ ಒಂದು ಪ್ರಾಣಿ’’. ಇದು ಗೊಂದಲಕ್ಕೆ ತಳ್ಳುವ ಓರ್ವ ವ್ಯಕ್ತಿಯ ದುರ್ಬಲ ವಾದ.

ಆಧುನಿಕ ಮಾನವರು ಕಾಣಿಸಿಕೊಳ್ಳುವ ಮೊದಲೇ, ಸುಮಾರು 15,000 ವರ್ಷಗಳ ಹಿಂದೂ ಫ್ರಾನ್ಸ್‌ನ ಲಸ್‌ಕಾಕ್ಸ್ ಗುಡ್ಡೆಗಳಲ್ಲಿ ಚಿತ್ರಿತವಾದಂತಹ ರೀತಿಯ ಕಾಡು ಕುದುರೆಗಳು ಏಶ್ಯಾ ಮತ್ತು ಯುರೋಪ್‌ನಲ್ಲಿ ಮಿಲಿಯಗಟ್ಟಲೆ ವರ್ಷಗಳಿಂದ ಓಡಾಡುತ್ತಿದ್ದವು. ಸ್ಟೆಪ್ಸ್ ಜನರ ಸಾಧನೆ ಎಂದರೆ ಆ ಕುದುರೆಗಳನ್ನು ಪಳಗಿಸಿ, ಸವಾರಿಮಾಡಿ, ಚಕ್ರಗಳಿರುವ ರಥಗಳಿಗೆ ‘‘ಕಟ್ಟಿ ಓಡಿಸಿದ್ದು. ಅಂತಹ ವಾಹನಗಳ ಯಾವುದೇ ಅವಶೇಷಗಳು ಸಿಂಧೂ ಕಣಿವೆಯ ಪ್ರದೇಶಗಳಲ್ಲಿ ಕಂಡುಬಂದಿಲ್ಲ. ಒಟ್ಟಿನಲ್ಲಿ ಅತ್ಯುತ್ಸಾಹ, ಅನ್ಯಾಕ್ರಮಣಶೀಲತೆಯು ಕೀಳರಿಮೆಯ ಜೊತೆ ಸೇರಿಕೊಂಡ ನಾವು ಯಾವಾಗಲೂ ಈ ದೇವತೆಗಳನ್ನು ಪೂಜಿಸಿದ್ದೆವು. ನಾವು ಯಾವಾಗಲೂ ಈ ಭಾಷೆ ಮಾತನಾಡುತ್ತಿದ್ದೆವು, ನಾವು ಯಾವಾಗಲೂ ಹೀಗೆಯೇ ಕಾಣಿಸುತ್ತಿದ್ದೆವು ಮತ್ತು ಯಾವಾಗಲೂ ಇಲ್ಲಿ ನಾವೇ ಸರಿ ಎಂಬ ಹೇಳಿಕೆಗಳನ್ನು ನೀಡುವಂತೆ ಮಾಡುತ್ತದೆ.

ಕೃಪೆ: scroll.in

Writer - ಗಿರೀಶ್ ಶಹಾನೆ

contributor

Editor - ಗಿರೀಶ್ ಶಹಾನೆ

contributor

Similar News