ಮುಂಬೈನಲ್ಲಿ 90 ರೂ.ಸನಿಹ ತಲುಪಿದ ಪೆಟ್ರೋಲ್ ದರ

Update: 2018-09-11 05:32 GMT

ಮುಂಬೈ, ಸೆ.11: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಮಂಗಳವಾರ ಮತ್ತಷ್ಟು ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 88.26 ರೂ.ಗೆ ಏರಿಕೆಯಾಗಿದ್ದರೆ, ಹೊಸದಿಲ್ಲಿಯಲ್ಲಿ ಪ್ರತಿ ಲೀಟರ್‌ಗೆ 80.87 ರೂ..ಕೋಲ್ಕತಾ 83.75 ರೂ. ಹಾಗೂ ಚೆನ್ನೈ 84.07 ರೂ. ಏರಿಕೆಯಾಗಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನ ಪ್ರಕಾರ, ಹೊಸದಿಲ್ಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 72.97 ರೂ., ಕೋಲ್ಕತಾದಲ್ಲಿ 75.82 ರೂ.,ಮುಂಬೈನಲ್ಲಿ 77.47 ರೂ. ಹಾಗೂ ಚೆನ್ನೈನಲ್ಲಿ 77.17 ಪ್ರತಿ ಲೀ.ಗೆ ಮಾರಾಟ ಮಾಡಲಾಗುತ್ತಿದೆ.

 ಪ್ರಸ್ತುತ ಕೇಂದ್ರ ಸರಕಾರ ಪೆಟ್ರೋಲ್‌ನ ಪ್ರತಿ ಲೀಟರ್‌ಗೆ 19.48 ರೂ. ಹಾಗೂ ಡೀಸೆಲ್‌ನ ಪ್ರತಿ ಲೀಟರ್‌ಗೆ 15.33 ರೂ. ಅಬಕಾರಿ ಸುಂಕ ವಿಧಿಸುತ್ತಿದೆ. ಇದರ ಜೊತೆಗೆ ಆಯಾ ರಾಜ್ಯಗಳು ವ್ಯಾಟ್‌ನ್ನು ವಿಧಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News