ಗುಂಡ್ಲುಪೇಟೆ: ಸಫಾರಿ ವಾಹನದ ಮೇಲೆ ಕಾಡಾನೆ ದಾಳಿ

Update: 2018-09-11 11:38 GMT

ಗುಂಡ್ಲುಪೇಟೆ,ಸೆ.11: ಸಫಾರಿಗೆ ಹೋಗುವ ವಾಹನದ ಮೇಲೆ ಸಿಟ್ಟಿಗೆದ್ದ ಕಾಡಾನೆಯೊಂದು ಹಠಾತ್ ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದೊಳಗೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಸಂಜೆ ಸಫಾರಿಗೆ ತೆರಳಿದ ಪ್ರವಾಸಿಗರು ಕಾಡಾನೆಯ ಹಿಂಡನ್ನು ಕಂಡು ಮೊಬೈಲ್‍ನಲ್ಲಿ ವೀಡಿಯೋ, ಪೋಟೋ ತೆಗೆದುಕೊಳ್ಳುವ ವೇಳೆ ಕಾಡಾನೆಯೊಂದು ಹಠಾತ್ ದಾಳಿ ನಡೆಸಿದೆ.

ಇದೇ ಮೊದಲ ಬಾರಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದೊಳಗೆ ಕಾಡಾನೆಯೊಂದು ಸಫಾರಿ ವಾಹನದ ಮೇಲೆ ದಾಳಿ ಮಾಡಲು ಮುಂದಾಗಿರುವುದು ಸಫಾರಿಗೆ ತೆರಳುವ ಪ್ರವಾಸಿಗರಿಗೆ ಆತಂಕ ತಂದಿದೆ. ಸಫಾರಿಗೆ ತೆರಳುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯಿಂದ ಯಾವುದೇ ವಿಧದ ಭದ್ರತೆ ಇಲ್ಲದೆಯೇ ವಾಹನದಲ್ಲಿ ಕಳುಹಿಸಲಾಗುತ್ತಿದ್ದು, ಇದರಿಂದ ಪ್ರವಾಸಿಗರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಈ ಬಗ್ಗೆ ಬಂಡೀಪುರ ಅರಣ್ಯಾಧಿಕಾರಿಗಳು ಮೌನವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News