ಫೋನಿನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಚೂರಿಯಿಂದ ಇರಿದು ಸಾಯಿಸಿದ !

Update: 2018-09-11 12:15 GMT

ದುಬೈ,ಸೆ.11 : ತನ್ನ ರೂಮ್ ಮೇಟ್ ಮೊಬೈಲ್ ಫೋನಿನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡಿದ ಎಂಬ ಒಂದೇ ಕಾರಣಕ್ಕಾಗಿ ಆತನನ್ನು ಕೊಂದ  37 ವರ್ಷದ ಭಾರತೀಯ ಕಟ್ಟಡ ನಿರ್ಮಾಣ ಕಾರ್ಮಿಕ ದುಬೈ ನ್ಯಾಯಾಲದಲ್ಲಿ ಕೊಲೆ ಪ್ರಕರಣ ಎದುರಿಸುತ್ತಿದ್ದಾನೆ. ಘಟನೆ ನಡೆಯುವಾಗ ಆತ ಮದ್ಯದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ.

ಘಟನೆ ಮಾರ್ಚ್ 30ರಂದು ಅಲ್ ಖುವಾಸಿಸ್ ಎಂಬಲ್ಲಿ ನಡೆದಿದ್ದು ಸಂತ್ರಸ್ತನಿಗೆಂದು ಆಯೋಜಿಸಲಾಗಿದ್ದ ವಿದಾಯ ಪಾರ್ಟಿಯಲ್ಲಿ ಈ ದುರಾದೃಷ್ಟಕರ ಘಟನೆ ನಡೆದಿದೆ. ಪಾರ್ಟಿ ನಡೆಯುತ್ತಿರುವಂತೆ ಆತ ದೊಡ್ಡ ಧ್ವನಿಯಲ್ಲಿ ಫೋನಿನಲ್ಲಿ ಯಾರ ಜತೆಗೋ ಮಾತನಾಡುತ್ತಿರುವುದನ್ನು ಕಂಡು ತಾಳ್ಮೆ ಕಳೆದುಕೊಂಡ ಆರೋಪಿ ಹಾಸಿಗೆಯ ಅಡಿಯಲ್ಲಿದ್ದ ಚೂರಿಯನ್ನು ತೆಗೆದು ಆತನ ಹೊಟ್ಟೆಗೆ ಇರಿದಿದ್ದ. ಸೀಸಿಟಿವಿ ದೃಶ್ಯದಲ್ಲಿ ಆರೋಪಿ ತನ್ನ ಬಟ್ಟೆಗಳಡಿಯಲ್ಲಿ ಚೂರಿ ಅಡಗಿಸಿ ಶೌಚಾಲಯಕ್ಕೆ ಹೋಗಿದ್ದರೂ ಹಿಂದಿರುಗುವಾಗ ಅದು ಆತನ ಬಳಿಯಿರದೇ ಇದ್ದುದು ಕಂಡು ಬಂದಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ದುಬೈ ನ್ಯಾಯಾಲಯ ಅಕ್ಟೋಬರ್ 7ಕ್ಕೆ ನಿಗದಿ ಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News