ಕೇರಳ ಮಹಾಮಳೆ : 4,778 ಸಂತ್ರಸ್ತರು ಇನ್ನೂ ಪರಿಹಾರ ಶಿಬಿರದಲ್ಲಿ

Update: 2018-09-11 16:25 GMT

ತಿರುವನಂತಪುರ, ಸೆ. 11: ಕೇರಳ ಮಹಾಮಳೆಗೆ ತುತ್ತಾದ ಒಂದು ತಿಂಗಳ ಬಳಿಕ 120 ಪರಿಹಾರ ಕೇಂದ್ರಗಳಲ್ಲಿ ಈಗಲೂ 4,778 ನೆರೆ ಸಂತ್ರಸ್ತರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ 29ರ ಬಳಿಕ ಮಳೆ ಹಾಗೂ ನೆರೆಗೆ 491 ಜನರು ಸಾವನ್ನಪ್ಪಿದ್ದಾರೆ. 14 ಜನರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ರಾಜ್ಯ ನಿಯಂತ್ರಣ ಕೊಠಡಿ ಹೇಳಿದೆ. ಮಳೆ ಹಾಗೂ ನೆರೆಯಿಂದ ಕಾಸರಗೋಡು ಜಿಲ್ಲೆಗೆ ಯಾವುದೇ ಹಾನಿ ಉಂಟಾಗಿಲ್ಲ. ತಿರುವನಂತಪುರ ಜಿಲ್ಲೆಯಲ್ಲಿ ಒಂದಿಷ್ಟು ಹಾನಿಯಾಗಿದೆ. ಆಲಪ್ಪುಳ, ಇಡುಕ್ಕಿ, ಪತ್ತನಂತಿಟ್ಟ, ಎರ್ನಾಕುಲಂ, ತ್ರಿಶೂರು, ಕೋಝಿಕೋಡ್ ಹಾಗೂ ಕಣ್ಣೂರು, ಪಾಲಕ್ಕಾಡ್, ಮಲಪ್ಪುರಂ, ಕೋಟ್ಟಯಂ, ಕೆಲವು ಭಾಗಗಳು ನೆರೆಗೆ ತುತ್ತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News