ಆಧಾರ್ ಸಾಫ್ಟ್‌ವೇರ್ ಹ್ಯಾಕಿಂಗ್ ವರದಿ ತಳ್ಳಿಹಾಕಿದ ಯುಐಡಿಎಐ

Update: 2018-09-12 05:50 GMT

 ಹೊಸದಿಲ್ಲಿ,ಸೆ.11: ಆಧಾರ್ ದಾಖಲಾತಿ ಸಾಫ್ಟ್‌ವೇರ್‌ನ್ನು ಹ್ಯಾಕ್ ಮಾಡಲಾಗಿದೆ ಎಂಬ ಮಾಧ್ಯಮ ವರದಿಯನ್ನು ತಳ್ಳಿಹಾಕಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು,ಇದು ಸಂಪೂರ್ಣ ತಪ್ಪು ಮತ್ತು ಹೊಣೆಗೇಡಿತನದ ವರದಿಯಾಗಿದೆ ಎಂದು ಹೇಳಿದೆ. ಸಾಮಾಜಿಕ ಮತ್ತು ಆನ್‌ಲೈನ್ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವ ಈ ವರದಿಯಲ್ಲಿ ಯಾವುದೇ ತಥ್ಯವಿಲ್ಲ ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನರಲ್ಲಿ ಗೊಂದಲವನ್ನು ಸೃಷ್ಟಿಸಲು ಉದ್ದೇಶಪೂರ್ವಕ ಪ್ರಯತ್ನಗಳನ್ನು ನಡೆಸುತ್ತಿವೆ ಎಂದೂ ಅದು ಮಂಗಳವಾರ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ.

ಆಧಾರ್ ದತ್ತಾಂಶ ಕೋಶಕ್ಕೆ ಕನ್ನ ಹಾಕಿ ಹಲವಾರು ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಬಹುದು ಎನ್ನುವುದು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದಿರುವ ಪ್ರಾಧಿಕಾರವು,ಭಾರತೀಯರ ಮಾಹಿತಿಗಳ ಸುರಕ್ಷತೆಯನ್ನು ಕಾಯ್ದಕೊಳ್ಳಲು ದೋಷರಹಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News