ಕೊಳ್ಳೇಗಾಲ: ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Update: 2018-09-11 18:40 GMT

ಕೊಳ್ಳೇಗಾಲ,ಸೆ.11: ಮುಸುಕಿನ ಜೋಳದ ಬೆಳೆ ಮಧ್ಯ ಅಕ್ರಮವಾಗಿ ಗಾಂಜಾಗಿಡ ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ಸತ್ತೇಗಾಲ ಜಾಗೇರಿಯ ಶಿಲುವೈಪುರ ಗ್ರಾಮದ ಆರೋಗ್ಯಸ್ವಾಮಿ ಎಂಬವರೇ ಬಂಧಿತ ಆರೋಪಿ. ಜಮೀನಿನಲ್ಲಿ ಆರೋಪಿ ಬೆಳೆದಿದ್ದ 1.600 ಕೆ.ಜಿ ಗ್ರಾಂ ತೂಕದ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ.

ಶಿಲುವೈಪುರ ಗ್ರಾಮದ ಮನೆಯ ಸಮೀಪವಿರುವ ಆರೋಪಿಯ ಜಮೀನಿನಲ್ಲಿ ಮುಸುಕಿನ ಜೋಳದ ಮಧ್ಯೆ ಗಾಂಜಾಗಿಡ ಬೆಳೆದಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್‍ಪಿ ಪುಟ್ಟಮಾದಯ್ಯ ಹಾಗೂ ವೃತ್ತ ನಿರೀಕ್ಷಕ ರಾಜಣ್ಣರವರ ನೇತೃತ್ವದಲ್ಲಿ ಗ್ರಾಮಾಂತರ ಎಸ್‍ಐ ವನರಾಜು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಗಾಂಜಾಗಿಡದ ಸೊಪ್ಪಿನ ಸಮೇತ ಬಂಧಿಸಿದ್ದಾರೆ. ಆರೋಪಿ ವಿರುದ್ಧ ದೂರು ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಈ ದಾಳಿಯಲ್ಲಿ ಎಎಸ್‍ಐ ಚಲವರಾಜು, ಮುಖ್ಯಪೇದೆಗಳಾದ ಗೋವಿಂದ, ಶಂಕರ್, ಮಧು, ಲಿಂಗರಾಜು, ಮಹೇಶ್, ರವಿ, ಪೇದೆ ರಘು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News