ಲಂಡನ್ ನ್ಯಾಯಾಲಯಕ್ಕೆ ಮಲ್ಯ ಹಾಜರು

Update: 2018-09-12 09:22 GMT

ಲಂಡನ್, ಸೆ.12: ಬ್ಯಾಂಕುಗಳಿಗೆ ಕೋಟಿಗಟ್ಟಲೆ ರೂ. ಸಾಲ ಮರುಪಾವತಿ ಮಾಡದೆ ಲಂಡನ್ ಗೆ ಪರಾರಿಯಾಗಿರುವ ಮಾಜಿ ಮದ್ಯದ ದೊರೆ ವಿಜಯ್ ಮಲ್ಯನನ್ನು ಭಾರತಕ್ಕೆ ಗಡಿಪಾರು ಮಾಡುವ ಅರ್ಜಿಯ ವಿಚಾರಣೆ  ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್  ನ್ಯಾಯಾಲಯದಲ್ಲಿಇಂದು  ಆರಂಭಗೊಂಡಿದ್ದು, ವಿಜಯ್ ಮಲ್ಯ ನ್ಯಾಯಾಲಯಕ್ಕೆ  ಹಾಜರಾದರು.

ಮಲ್ಯನನ್ನು ಗಡಿಪಾರು ಮಾಡಿದರೆ  ಮುಂಬೈನ ಅರ್ಥರ್ ರೋಡ್ ನಲ್ಲಿರುವ ಜೈಲು ಮಲ್ಯನಿಗೆ ಮನೆಯಾಗಲಿದೆ. ಇದರಲ್ಲಿನ ಬ್ಯಾರಕ್ ನಂಬರ್ 12 ನಲ್ಲಿರುವ ಸೌಲಭ್ಯಗಳ ವಿವರವನ್ನೊಳಗೊಂಡ ವೀಡಿಯೋ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News