ಚಿಕ್ಕಮಗಳೂರು: ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ

Update: 2018-09-12 11:46 GMT

ಚಿಕ್ಕಮಗಳೂರು, ಸೆ.12: ನಗರದ ಸೈಂಟ್ ಮೇರಿಸ್ ಕಾಲೇಜಿನಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.

ವೇದಿಕೆ ಸಮಾರಂಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಸ್.ದೇವರಾಜು ಕ್ರೀಡಾಕೂಟದ ಧ್ವಜಾರೋಹಣ ನಡೆಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪರವರು ದೀಪ ಬೆಳಗಿಸುವುದರ ಮೂಲಕ ಕ್ರೀಡಾಕೂಟದ ಉದ್ಘಾಟನೆ ಮಾಡಿದರು. ಕ್ರೀಡಾ ಜ್ಯೋತಿಯನ್ನು ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಜೆರಾಲ್ಡ್ ಲೋಬೋರವರು ಸ್ವೀಕರಿಸಿ, ಎಲ್ಲಾ ಕ್ರೀಡಾಪಟುಗಳಿಗೆ ಶುಭವನ್ನು ಕೋರಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ತಾ.ಪಂ ಅಧ್ಯಕ್ಷ ಜಯಣ್ಣ ನೆಟ್ಟೆಕೆರೆಹಳ್ಳಿ ಕ್ರೀಡಾಪಟುಗಳಿಗೆ ಹಿತನುಡಿಗಳನ್ನು ಹೇಳಿ ಪ್ರೋತ್ಸಾಹಿಸಿದರು.

ಕ್ರೀಡಾಕೂಟದಲ್ಲಿ 28 ಕಾಲೇಜಿನಿಂದ ಸುಮಾರು 1000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು, ಇದರಲ್ಲಿ 130 ತಂಡ ಬಾಲಕರು ಮತ್ತು 110 ತಂಡ ಬಾಲಕಿಯರಿಗೆ ಸುಮಾರು 105 ತೀರ್ಪುಗಾರರು ತೀರ್ಪನ್ನು ನೀಡಿ ಎಲ್ಲಾ ಪಂದ್ಯಗಳನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟರು. 50ಕ್ಕೂ ಹೆಚ್ಚು ಬಗೆಯ ಪಂದ್ಯಗಳು ಮತ್ತು ವಿವಿಧ ಬಗೆಯ ಮೇಲಾಟಗಳು ಸೇರಿ ಎರಡು ದಿನ ನಡೆಯಬೇಕಿದ್ದ ಕ್ರೀಡಾಕೂಟವನ್ನು ಒಂದೇ ದಿನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಹೆಗ್ಗಳಿಕೆ ಸೈಂಟ್ ಮೇರಿಸ್ ಕಾಲೇಜಿನದಾಗಿದ್ದು, ಇದಕ್ಕಾಗಿ ಸಹಕರಿಸಿದ ಎಲ್ಲಾ ಸಿಬ್ಬಂದಿವರ್ಗ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ತೀರ್ಪುಗಾರರಿಗೂ ಕಾಲೇಜು ಆಡಳಿತ ಮಂಡಳಿ ಅಭಿನಂದನೆ ತಿಳಿಸಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News