ಹಾಸನ: ನಗರಸಭೆ ಆರೋಗ್ಯ ಅಧಿಕಾರಿಗಳಿಂದ ಗಣಪತಿ ಪರಿಶೀಲನೆ; ಲಕ್ಷಾಂತರ ರೂ.ಬೆಲೆ ಬಾಳುವ ಗಣಪತಿ ವಶ

Update: 2018-09-12 11:59 GMT

ಹಾಸನ,ಸೆ.12: ಪಿಓಪಿ ಗಣಪತಿ ನಿರ್ಮಾಣ ಮಾಡುತ್ತಿರುವ ಬಗ್ಗೆ ನಗರಸಭೆಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ನಗರಸಭೆ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ನಗರದ ಹೊಸ ಬಸ್‍ನಿಲ್ದಾಣ ಎದುರು ಹೌಸಿಂಗ್ ಬೋರ್ಡ್‍ನಲ್ಲಿ ನಿರ್ಮಿಸಲಾಗಿರುವ ಖಾಲಿ ಇರುವ ಮಳಿಗೆಗಳಲ್ಲಿ ಪರಿಸರಕ್ಕೆ ಹಾನಿ ಮಾಡುವ ಪಿಓಪಿ ಗಣಪತಿಯನನ್ನು ರಂಗಸ್ವಾಮಿ ಎಂಬವರು ಮಾರಾಟ ಮಾಡುತ್ತಿದ್ದಾರೆ ಎಂಬ ದೂರವಾಣಿ ಕರೆಯ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ನಗರಸಭೆ ಆರೋಗ್ಯಾಧಿಕಾರಿಗಳು ಮೊದಲು ಪರಿಶೀಲನೆ ನಡೆಸಿ ಗಣಪತಿಗಳನ್ನು ವಶಪಡಿಸಿಕೊಂಡರು.

'ನಗರದ ಹೊಸ ಬಸ್‍ನಿಲ್ದಾಣ ಎದುರು ನೂತನವಾಗಿ ನಿರ್ಮಿತವಾಗುತ್ತಿರುವ ಕಟ್ಟಡವೊಂದರಲ್ಲಿ ವ್ಯಾಪಾರ ಮಾಡಲಾಗುತ್ತಿರುವ ಗಣಪತಿ ಮೇಲ್ನೋಟಕ್ಕೆ ಪಿಓಪಿ ಎಂದು ಕಾಣುತ್ತಿದೆ. ಪರಿಸರಕ್ಕೆ ದಕ್ಕೆ ಆಗುವ ಪಿಓಪಿ ಗಣೇಶ ಬೇಡ ಎಂದು ಮೊದಲೇ ತಿಳಿಸಲಾಗಿದೆ. ಕಳೆದ ವರ್ಷ ಕೂಡ ಅಂತಹ ಗಣಪತಿಯನ್ನು ವ್ಯಾಪಾರ ಮಾಡದಂತೆ ಹೇಳಲಾಗಿದ್ದರೂ ಮತ್ತೆ ಅಂತಹ ತಪ್ಪು ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಮಿಶ್ರಿತ ಗಣಪತಿ ವ್ಯಾಪಾರವನ್ನು ನಿಷೇಧಿಸಲಾಗಿದೆ. ಇದೇ ತಿಂಗಳು ನಡೆಯುವ ಗೌರಿ-ಗಣೇಶ ಹಬ್ಬಕ್ಕೆ ಗಣಪತಿಯನ್ನು ಯಾರಾದರೂ ಹೊರಗಿನಿಂದ ಇಲ್ಲವೇ ಸ್ಥಳೀಯರು ವ್ಯಾಪಾರ ಮಾಡಲು ಮುಂದಾದರೆ ಅವರ ಮೇಲೆ ದಂಡ ಸಮೇತ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಸಿದರು.

ಈ ಸಂದರ್ಭ ನಗರಸಭೆ ಆರೋಗ್ಯಾಧಿಕಾರಿ ಆದೀಶ್ ಕುಮಾರ್, ಅಧಿಕಾರಿ ಸುರೇಶ್ ಬಾಬು, ಮಂಜುನಾಥ್, ರಂಜನ್, ರಾಜೇಂದ್ರ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News