ಲಂಚಕ್ಕೆ ಬೇಡಿಕೆಯಿಟ್ಟ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

Update: 2018-09-12 14:09 GMT

ಬೆಂಗಳೂರು, ಸೆ.12: ಧಾರವಾಡದ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ನಿವಾಸಿಯಾಗಿರುವ ದೂರುದಾರರು ಅವರ ಜಮೀನಿಗೆ ವಾಟ್ನಿ ಮಾಡಿಕೊಡಲು 15 ಸಾವಿರ ರೂ.ಲಂಚದ ಬೇಡಿಕೆ ಇಟ್ಟು 5 ಸಾವಿರ ರೂ.ಪಡೆದುಕೊಳ್ಳುವಾಗ ತೀರ್ಥ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ವೈ.ಎನ್.ಗುಂಡೋಳ್ಕರ್, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ತೀರ್ಥ ಗ್ರಾಮದ ನಿವಾಸಿಯು ಜಮೀನಿನ ವಾಟ್ನಿ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದಾರೆ. ಆದರೆ, ವಾಟ್ನಿ ಮಾಡಿಕೊಡಲು ತೀರ್ಥ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳು 15 ಸಾವಿರ ರೂ.ಲಂಚ ನೀಡಲು ಹೇಳಿದ್ದಾರೆ. ಅವರ ಸೂಚನೆಯಂತೆ 5 ಸಾವಿರ ರೂ.ಅಡ್ವಾನ್ಸ್ ನೀಡಲು ಮುಂದಾಗಿದ್ದಾರೆ. ಹಾಗೆಯೇ ಎಸಿಬಿಗೆ ಗ್ರಾಮ ಲೆಕ್ಕಾಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಈ ಮೊದಲೆ ತಿಳಿಸಿದ್ದಾರೆ. ಹೀಗಾಗಿ, ಆರೋಪಿ ಗ್ರಾಮ ಲೆಕ್ಕಾಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News