ಸಿಬಿಎಸ್ ಇ ಟಾಪರ್ ಅತ್ಯಾಚಾರ ಪ್ರಕರಣ: ಆರೋಪಿಗಳಲ್ಲೊಬ್ಬ ಸೈನಿಕ

Update: 2018-09-15 11:26 GMT

ಚಂಡೀಗಢ, ಸೆ.15: ಸಿಬಿಎಸ್ ಇ ಟಾಪರ್ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳಲ್ಲಿ ಭಾರತೀಯ ಸೇನೆಯ ಸೈನಿಕನೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರ್ಯಾಣದಲ್ಲಿ ಈ ಘಟನೆ ನಡೆದಿದ್ದು, ಯುವತಿಯನ್ನು ಅಪಹರಿಸಿ ಅತ್ಯಾಚಾರಗೈಯಲಾಗಿತ್ತು. ಯುವತಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಅತ್ಯಾಚಾರಗೈದು ನಂತರ ಬಸ್ ನಿಲ್ದಾಣದಲ್ಲಿ ಆಕೆಯನ್ನು ಎಸೆಯಲಾಗಿತ್ತು.

“ರಾಜಸ್ಥಾನ ಸೇನಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಪಂಕಜ್ ಫೌಝಿ ಕೂಡ ಆರೋಪಿಗಳಲ್ಲೊಬ್ಬ. ಆತನ ಬಂಧನಕ್ಕೆ ಈಗಾಗಲೇ ಒಂದು ತಂಡ ರಾಜಸ್ಥಾನಕ್ಕೆ ತೆರಳಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News