ಸಾಗರ: ಶಾಲೆಯ ಬೀಗ ಮುರಿದು ಕಳ್ಳತನ

Update: 2018-09-17 07:49 GMT

ಸಾಗರ, ಸೆ.17: ಇಲ್ಲಿನ ಬಿ.ಎಚ್.ರಸ್ತೆಯಲ್ಲಿರುವ ಕೋಯ ಉರ್ದು ಶಾಲೆಯಿಂದ ಕಳೆದ ರಾತ್ರಿ ಕಳ್ಳತನ ನಡೆದಿದೆ.

ಶಾಲಾ ಕಚೇರಿಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ನಗದು ಕಳವುಗೈದಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ನಿನ್ನೆ ರಾತ್ರಿ ಶಾಲೆಯ ಗುಮಾಸ್ತ ಹನೀಫ್ ಎಂಬವರು ರಾತ್ರಿ 10:30 ಗಂಟೆಗೆ ತನಕ ಶಾಲೆ ಬಳಿಯೇ ಇದ್ದರು. ಅವರು ನಿರ್ಗಮನದ ಬಳಿಕ ಈ ಕೃತ್ಯ ನಡೆದಿದೆ.

 ಕಳ್ಳರು ಶಾಲೆಯ ಸಿಸಿಟಿವಿ ಕ್ಯಾಮರಾ ಹಾಗೂ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿಸಿದ್ದಾರೆ.
ಇಂದು ಬೆಳಗ್ಗೆ ಗುಮಾಸ್ತ ಶಾಲೆ ಬಳಿ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News