ಐವರು ಹೋರಾಟಗಾರರ ಗೃಹಬಂಧನ ಸೆ.19ರ ತನಕ ವಿಸ್ತರಿಸಿದ ಸುಪ್ರೀಂಕೋರ್ಟ್

Update: 2018-09-17 09:19 GMT

 ಹೊಸದಿಲ್ಲಿ, ಸೆ.17: ಭೀಮಾ ಕೋರೆಗಾಂವ್ ಹಿಂಸಾಚಾರ ಘಟನೆಯಲ್ಲಿ ಭಾಗಿಯಾಗಿದ್ದಾರೆ ಹಾಗೂ ಮಾವೋವಾದಿಗಳೊಂದಿಗೆ ಸಂಪರ್ಕದಲ್ಲಿದ್ದಾರೆಂಬ ಶಂಕೆಯ ಮೇರೆಗೆ ಪುಣೆ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಐವರು ಮಾನವಹಕ್ಕು ಹೋರಾಟಗಾರರ ಗೃಹಬಂಧನವನ್ನು ಸುಪ್ರೀಂಕೋರ್ಟ್ ಸೆ.19ರ ತನಕ ವಿಸ್ತರಿಸಿದೆ.

 ಐವರು ಹೋರಾಟಗಾರರ ಬಂಧನ ಪ್ರಶ್ನಿಸಿ ಇತಿಹಾಸ ತಜ್ಞೆ ರೊಮಿಲಾ ಥಾಪರ್ ಹಾಗೂ ಇತರ ನಾಲ್ವರು ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ಸೆ.19ರಂದೇ ನಡೆಸಲಾಗುವುದು ಎಂದು ಸೋಮವಾರ ನೀಡಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ.

ಕೇಂದ್ರ ಸರಕಾರ ಸೆ.19 ರಂದು ಪ್ರಕರಣದ ಡೈರಿ ಹಾಗೂ ಇತರ ಸಾಕ್ಷಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News