ವಿಶ್ವಕರ್ಮ ಜನಾಂಗದ ದುಡಿಮೆಯಲ್ಲೇ ಹೃದಯ ಶ್ರೀಮಂತಿಕೆ ತುಂಬಿಕೊಂಡಿದೆ: ಮಾಜಿ ಸಚಿವೆ ಮೋಟಮ್ಮ

Update: 2018-09-17 18:36 GMT

ಮೂಡಿಗೆರೆ, ಸೆ.17: ಸಮಾಜದ ಸಂಸ್ಕೃತಿ ಹಾಗೂ ಸಮುದಾಯದ ಪರಂಪರೆಯನ್ನು ಉಳಿಸಲು ಅನಾದಿ ಕಾಲದಿಂದಲೂ ಪ್ರಯತ್ನಿಸಿ ಯಶಸ್ವಿಯಾದ ವಿಶ್ವ ಕರ್ಮ ಜನಾಂಗ ತಮ್ಮ ದುಡಿಮೆಯಲ್ಲೇ ಹೃದಯ ಶ್ರೀಮಂತಿಕೆಯನ್ನು ತುಂಬಿಕೊಂಡಿದ್ದಾರೆಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು. 

ಅವರು ತಾಲೂಕು ಆಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಭಾ ವತಿಯಿಂದ ಪಟ್ಟಣದ ಚರ್ಚ್‍ಹಾಲ್‍ನಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾರಿ ಕಾಣದವರಿಗೆ ದೀಪವಾಗಬಲ್ಲ ಜನಾಂಗವೊಂದಿದ್ದರೆ ಅದು ವಿಶ್ವಕರ್ಮರು. ಕತ್ತಿರಿಸಿದ ಮರದ ದಿಮ್ಮಿಯನ್ನು ಶಿಲೆಯಾಗಿ ತಯಾರಿಸಬಲ್ಲ ಖ್ಯಾತಿ ಹೊಂದಿದ್ದರೆ, ಚಿನ್ನದ ಗಟ್ಟಿಯನ್ನು ಆಬರಣವನ್ನಾಗಿ ಮಾಡಿ, ಸೌಂದರ್ಯ ಕೊಡುವ ಕುಲ ಕಸಬನ್ನು ಹೊಂದಿದ್ದಾರೆ. ತನ್ನ ಸಂಶ ಪರಂಪರೆಯಿಂದ ಬಂದಿರುವ ಕುಲ ಕಸುಬಿನಿಂದ ಪ್ರಖ್ಯಾತಿಗೊಂಡು ಜಗತ್ತನೇ ತಮ್ಮ ಕೈಚಳಕದಲ್ಲಿ ಸೌಂದರ್ಯ ಮೂರ್ತಿಯನ್ನಾಗಿ ಮಾಡುವ ಖ್ಯಾತಿಯನ್ನು ಹೊಂದಿದ್ದಾರೆ ಎಂದು ಬಣ್ಣಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಪುರಾತನ ಕಾಲದ ಕಲೆಯನ್ನು ಸೃಷ್ಠಿ ಮಾಡುವ ವಿಧಾನದೊಂದಿಗೆ ಪ್ರಾರಂಭಗೊಂಡ ವಿಶ್ವಕರ್ಮ ಜನಾಂಗ, ಆಚಾರ, ವಿಚಾರಗಳಿಂದಾಗಿ ಸಂಪ್ರದಾಯವಾದಿಗಳಾಗಿ ಯಾವುದೇ ಇಂಜಿನಿಯರ್‍ಗಳಿಗೆ ಕೊರತೆಯಿಲ್ಲವಾದಂತಹ ಕುಲ ಕಸುಬಿನ ಸಮುದಾಯವಾಗಿದೆ. ಗ್ರಾಮೀಣ ಶೈಲಿಯ ಮನೆಯ ಗೋಡೆಗಳನ್ನು ಕಟ್ಟುವಾಗಲೂ ಇಂಜಿನಿಯರ್‍ಗಳ ಅಗತ್ಯವಿದೆ. ಮೇಲ್ಚಾವಣಿ ಕೆಲಸಕ್ಕೆ ವಿಶ್ವಕರ್ಮ ವರ್ಗದವರೇ ಬೇಕು. ಇಲ್ಲಿ ಯಾವುದೇ ಇಂಜಿನಿಯರ್‍ಗಳ ಕೈಚಳಕ ನಡೆಯದು. ಇಂತಹ ಜನಾಂಗದ ಅಭಿವೃದ್ಧಿಗೆ ತಾವು ಶ್ರಮಿಸುವುದಾಗಿ ಭರವಸೆ ನೀಡಿದರು. 

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಚ್ಛಾಶಕ್ತಿ ಗುರಿಯನ್ನು ಹೊಂದಿರುವ ವಿಶ್ವಕರ್ಮ ಜನಾಂಗ ತನ್ನ ಕುಲ ಕಸುಬನ್ನೇ ಪ್ರಮುಖ ಬಂಡವಾಳವನ್ನಾಗಿ ಮಡಿಕೊಂಡು ಜ್ಞಾನದ ಕೊರತೆಯನ್ನು ನೀಗಿಸಿ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದ ಹೃದಯ ಶ್ರೀಮಂತಿಕೆಯ ಜನಾಂಗವಾಗಿದೆ. ಯಾವುದೇ ಜನಾಂಗದ ವ್ಯಕ್ತಿಯಾಗಲೀ ಸಮಾಜ ಸೇವೆಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಾಗ ಉನ್ನತ ಹುದ್ದೆ ಹಾಗೂ ನಾಯಕ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಅರಂಭದಲ್ಲಿ ಪಟ್ಟಣದ ದೇವಿರಮ್ಮ ಬನದಿಂದ ವಿಶ್ವಕರ್ಮ ಗುರುವಿನ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಮುದಾಯದ ಬಾಲಕೀಯರಿಂದ ಭರತನಾಟ್ಯ ನೆರದಿದ್ದವರನ್ನು ರಂಜಿಸಿದವು. 

ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಭಾದ ಅಧ್ಯಕ್ಷ ಎ.ಜಿ.ಮಂಂಜುನಾಥ್, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಜಿ.ಪಂ.ಸದಸ್ಯೆ ಸುಧಾ ಯೋಗೇಶ್, ತಹಸೀಲ್ದಾರ್ ಪದ್ಮನಾಭ ಶಾಸ್ತ್ರಿ, ತಾ.ಪಂ. ಇಒ ಡಿ.ಡಿ.ಪ್ರಕಾಶ್, ಮುಖಂಡರಾದ ಗಣಪತಿ ಆಚಾರ್, ರಘುಪತಿ ಆಚಾರ್, ವಾಸುದೇವ್, ಸತ್ಯನಾರಾಯಣ, ಪಟೇಲ್ ಮಂಜು, ಸಂಧ್ಯಾ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News