ಸ್ನೇಹಜೀವಿ ಕಾಳಯ್ಯ

Update: 2018-09-19 11:48 GMT

ಮೂಡಿಗೆರೆ, ಸೆ.19: ಕಳೆದ 30 ವರ್ಷದಿಂದ ಪಟ್ಟಣದ ಮನೆಗಳಲ್ಲಿ ಕಟ್ಟಿಗೆ ಒಡೆದು ಜೀವನ ಸಾಗಿಸುತ್ತಿದ್ದ ಸ್ನೇಹಜೀವಿ ಅವಿವಾಹಿತ ಕಾಳಯ್ಯ (75) ಎಂಬವರು ಬುಧವಾರ ಬೆಳಗ್ಗೆ ಸರಕಾರಿ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾದರು. 

ಕಾಳಯ್ಯ ಅವರ ಪಟ್ಟಣದ ಎಲ್ಲರಿಗೂ ಚಿರಪರಿಚತರಾಗಿದ್ದ ವ್ಯಕ್ತಿ. ತಮ್ಮ ಇಳಿ ವಯಸ್ಸಿನಲ್ಲೂ ಕಟ್ಟಿಗೆ ಪಡೆದು ಸಂಜೆಯವರೆಗೂ ಕಟ್ಟಿಗೆ ಒಡೆದು, ಅದರಲ್ಲಿ ಸಿಕ್ಕ ಹಣದಿಂದ ಜೀವನ ಸಾಗಿಸುತ್ತಿದ್ದರು. ಇದರಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದರು ಇವರು ಕೆ.ಎಂ.ರಸ್ತೆಯ ಕೆಪಿ ಕಾಫಿ ಲಿಂಕ್ಸ್‍ನ ಪಕ್ಕದ ಚಿಕ್ಕ ಕೋಣೆಯೊಂದರಲ್ಲಿ ರಾತ್ರಿ ಮಲಗುತ್ತಿದ್ದರು.

ಕಳೆದ ಒಂದು ವಾರದ ಹಿಂದೆ ಅನಾರೋಗ್ಯದಿಂದಾಗಿ ಸಾರ್ವಜನಿಕರ ನೆರವಿನಿಂದ ಎಂಜಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ. ಅವರ ಊರು ಮತ್ತು ಕುಟುಂಬದ ಬಗ್ಗೆ ಪಟ್ಟಣದ ನಿವಾಸಿಗಳಿಗೆ ಮಾಹಿತಿ ಇಲ್ಲದ ಕಾರಣ, ಅವರ ಮೃತ ದೇಹವನ್ನು ಸಮಾಜ ಸೇವಕರಾದ ಫಿಶ್ ಮೋನು, ಅಬ್ದುಲ್ ರೆಹಮಾನ್, ಎಂ.ಎಸ್.ಇಬ್ರಾಹಿಂ, ಹಸೈನಾರ್ ಅವರು ಬೀಜವಳ್ಳಿಯ ಸ್ಮಶಾನದಲ್ಲಿ ಧಪನ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ