ಹನೂರು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

Update: 2018-09-19 15:50 GMT

ಹನೂರು,ಸೆ.19: ಉದ್ಯೋಗ ಖಾತ್ರಿ ಯೋಜನೆಯು ಸಮಾಜದಲ್ಲಿ ಅತ್ಯಂತ ಕೆಳ ಮಟ್ಟದಲ್ಲಿರುವ ಬಡವರನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸೂಕ್ತ ಮಾರ್ಗಸೂಚಿ ಎಂದು ಪಿಡಿಒ ನಂಜುಂಡಸ್ವಾಮಿ ತಿಳಿಸಿದರು 

ತಾಲೂಕಿನ ಪೊನ್ನಾಚ್ಚಿ ಗ್ರಾಮ ಪಂ. ನ 2017-2018ಸಾಲಿನ ಮೊದಲನೇ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋದನೆ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯ ಆದಾಯ ಮೂಲವನ್ನು ಗ್ರಾಮೀಣ ಮಟ್ಟದಲ್ಲಿ ನರೇಗಾ ಯೋಜನೆ ಮೂಲಕ ಪಡೆಯಲು ಸರ್ಕಾರ ಉದ್ಯೋಗಗಳನ್ನು ಕಲ್ಪಿಸಿದ್ದು, ಈ ದಿಸೆಯಲ್ಲಿ ಒಬ್ಬ ವ್ಯಕ್ತಿಗೆ ಒಂದು ದಿನದ ಕೂಲಿಗೆ ಈ ವರ್ಷದಿಂದ 249 ರೂಗಳನ್ನು ಮಾಡಿದ್ದು, ಗ್ರಾಮಸ್ಥರು ತಾವೇ ಮುಂದೆ ಬಂದು ಪಂಚಾಯತ್ ನಲ್ಲಿ ಉದ್ಯೋಗ ಕೇಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಿವಬಸಪ್ಪ, ಉಪಾಧ್ಯಕ್ಷ ಮಹದೇವಮ್ಮ, ನೋಡಲ್ ಅಧಿಕಾರಿ ಶಾಂತಕುಮಾರ್, ತಾಲೂಕು ಲೆಕ್ಕಸಂಯೋಜಕ ಮನೋಹರ್, ಗ್ರಾಪಂ ಸದಸ್ಯರು ಗ್ರಾಮದ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News