ಹನೂರು: ವಿ.ಎಸ್ ದೊಡ್ಡಿ, ಬಸವನಗುಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Update: 2018-09-19 15:59 GMT

ಹನೂರು,ಸೆ.19: ಸಹಕಾರ ಸಂಘಗಳು ರೈತರ ಶ್ರೇಯೋಭಿವೃದ್ದಿಗೆ ಸದಾ ಶ್ರಮಿಸುತ್ತಿದ್ದು, ರೈತರು ಗುಣ ಮಟ್ಟದ ಹಾಲು ಪೂರೈಸುವುದರ ಮುಖಾಂತರ ಸಹಕಾರ ಸಂಘಗಳು ಲಾಭದಾಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ಚಾಮುಲ್ ಅಧ್ಯಕ್ಷ ಸಿ.ಎನ್ ಗುರುಮಲ್ಲಪ್ಪ ತಿಳಿಸಿದರು.

ತಾಲೂಕಿನ ವಿ.ಎಸ್ ದೊಡ್ಡಿ ಮತ್ತು ಬಸವನಗುಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು 
ಸಭೆಯ ಪ್ರಾರಂಭದಲ್ಲಿ ವಿಸ್ತರಣಾಧಿಕಾರಿ ಮಂಜುಳಾ 2017-18 ರ ಆದಾಯ ಖರ್ಚನ್ನು ಮಂಡಿಸಿ ಮಾತನಾಡುತ್ತಾ, ವಿ.ಎಸ್ ದೊಡ್ಡಿ ಹಾಲು ಉತ್ಫಾದಕರ ಸಂಘ ಕಳೆದ ಸಾಲಿನಲ್ಲಿ 96,036 ರೂ. ನಿವ್ವಳ ಲಾಭಗಳಿಸಿದ್ದು, ಬಸವನಗುಡಿ ಹಾಲು ಉತ್ಪಾದಕರ ಸಹಕಾರ ಸಂಘ1.34 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದರು. ನಂತರ ಚಾಮುಲ್ ಅಧ್ಯಕ್ಷ ಸಿ.ಎನ್ ಗುರುಮಲ್ಲಪ್ಪ ಮಾತನಾಡಿದರು. 

ಈ ಸಂದರ್ಭ ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಚಾಮುಲ್ ಉಪವ್ಯವಸ್ಥಾಪಕ ಶರತ್, ವಿಸ್ತರಣಾಧಿಕಾರಿ ಮಂಜುಳಾ, ಸಂಘಗಳ ಅಧ್ಯಕ್ಷರುಗಳಾದ ಎಸ್ ಮಣಿ, ಮಾದೇಶ್ ಕಾರ್ಯದರ್ಶಿ, ಮಹದೇವಸ್ವಾಮಿ ಗೋವಿಂದ ಹಾಗು ರೈತರು ಬಾಗವಹಿಸಿದ್ದರು. 



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News