ಹಾವಿಗೆ ಎಂಆರ್‍ಐ ಸ್ಕ್ಯಾನ್ ನಡೆಸಿದ ವೈದ್ಯರು!

Update: 2018-09-21 11:08 GMT

ಮುಂಬೈ, ಸೆ.21: ಮುಂಬೈ ಉಪನಗರಿ ದಹಿಸರ್ ನಲ್ಲಿ ಪತ್ತೆಯಾದ ಹಾವೊಂದಕ್ಕೆ ಸ್ಥಳೀಯರು ಬೆತ್ತದಿಂದ ಹೊಡೆದ ಪರಿಣಾಮ ಅದರ ಬೆನ್ನಿನ ಮೂಳೆ ಮುರಿದಿದ್ದು, ವೈದ್ಯರು ಹಾವಿನ ಎಂಆರ್‍ಐ ಸ್ಕ್ಯಾನ್ ನಡೆಸಿದ್ದಾರೆ.

ಗಂಭೀರ ಗಾಯಗೊಂಡಿದ್ದ ವಿಷ ಸರ್ಪವನ್ನು ಮೊದಲು ಗಮನಿಸಿದ ಸ್ಥಳೀಯ ಹವಾಲ್ದಾರ್ ಅದನ್ನು ಉರಗ ರಕ್ಷಕ ಅನಿಲ್ ಕುಬಲ್ ಎಂಬವರಿಗೆ ನೀಡಿದ್ದರು.  ಅವರು ಅದನ್ನು ಚೆಂಬೂರಿನಲ್ಲಿರುವ ಪಶುವೈದ್ಯೆ ದೀಪಾ ಕತ್ಯಾಲ್ ಬಳಿ ಕೊಂಡೊಯ್ದಿದ್ದು ಅದರ ಬೆನ್ನಿನ ಮೂಳೆ ಮುರಿದಿರುವುದಾಗಿ ಅವರು ಹೇಳಿದ್ದರು. ನಂತರ ರೇಡಿಯಾಲಜಿಸ್ಟ್ ಡಾ ರವಿ ಥಾಪ್ರ ಅವರು ಹಾವಿನ ಎಂಆರ್‍ಐ ನಡೆಸಿದ್ದರು. ತಾವು ಇದೇ ಮೊದಲ ಬಾರಿ ಹಾವೊಂದರ ಎಂಆರ್‍ಐ ಸ್ಕ್ಯಾನ್ ನಡೆಸಿದ್ದಾಗಿ ಅವರು ಹೇಳಿದ್ದಾರೆ.

ಹಾವು ಈಗ  ಚಿಕಿತ್ಸೆಗೆ ಸ್ಪಂದಿಸುತ್ತಿದೆ, ಔಷಧಿಗಳನ್ನು ಟ್ಯೂಬ್ ಮೂಲಕ ಅದಕ್ಕೆ ನೀಡಲಾಗುತ್ತಿದೆ ಎಂದು ಅದಕ್ಕೆ ಚಿಕಿತ್ಸೆ ನೀಡುತ್ತಿರುವ ಇನ್ನೊಬ್ಬ ವೈದ್ಯೆ ಡಾ. ತ್ರಿಶಾ ಡಿಸೋಜ ಹೇಳಿದ್ದಾರೆ. ಡಾ. ದೀಪಾ ಕತ್ಯಾಲ್ ಅವರು ಹಾವಿಗೆ ಕೋಲ್ಡ್ ಲೇಸರ್ ಚಿಕಿತ್ಸೆ ಒದಗಿಸಿದ್ದಾರೆ ಇದು ನೋವು ಶಮನಕ್ಕೆ ಸಹಕಾರಿ ಎಂದು ಕುಬಲ್ ಹೇಳಿದ್ದಾರೆ. ಹಾವು ಗುಣಮುಖವಾದ ಕೂಡಲೇ ಅದನ್ನು ಕಾಡಿಗೆ ಬಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News