ರಫೇಲ್ ಒಪ್ಪಂದ: ಭಾರತದ ಪಾಲುದಾರನ ಆಯ್ಕೆಯಲ್ಲಿ ನಮ್ಮ ಪಾತ್ರವಿಲ್ಲ: ಫ್ರಾನ್ಸ್ ಸರಕಾರ ಸ್ಪಷ್ಟನೆ

Update: 2018-09-22 06:14 GMT

 ಹೊಸದಿಲ್ಲಿ, ಸೆ.22: ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದ ವಿಚಾರದಲ್ಲಿ ಭಾರತದ ಕೈಗಾರಿಕಾ ಪಾಲುದಾರರಿಗೂ, ನಮಗೂ ಯಾವುದೇ ಸಂಬಂಧವಿಲ್ಲ. ಒಪ್ಪಂದದಲ್ಲಿ ಫ್ರಾನ್ಸ್ ಕಂಪೆನಿಗಳಿಗೆ ಭಾರತದ ಕಂಪೆನಿಗಳನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರವಿದೆ ಎಂದು ಫ್ರಾನ್ಸ್ ಸರಕಾರ ಸ್ಪಷ್ಟನೆ ನೀಡಿದೆ.

 58,000 ಕೋಟಿ ರೂ. ರಫೇಲ್ ಒಪ್ಪಂದದಲ್ಲಿ ಭಾರತ ಸರಕಾರ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪೆನಿಯ ಪಾಲುದಾರನಾಗಿ ನಿಯೋಜಿಸುವಂತೆ ಶಿಫಾರಸು ಮಾಡಿತ್ತು. ನಮಗೆ ಬೇರೆ ಯಾವುದೇ ಆಯ್ಕೆಯನ್ನು ನೀಡಿರಲಿಲ್ಲ ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡ್ ಶುಕ್ರವಾರ ಸಂದರ್ಶನವೊಂದಲ್ಲಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಫ್ರಾನ್ಸ್ ಸರಕಾರ ಈ ಸ್ಪಷ್ಟನೆ ನೀಡಿದೆ.

ರಫೇಲ್ ಯುದ್ದ ವಿಮಾನ ತಯಾರಕರಾದ ಡಾಸೌಲ್ಟ್ ಏವಿಯೇಶನ್ ಕಂಪೆನಿಯೇ ಒಪ್ಪಂದದ ಕರಾರುಗಳನ್ನು ಪೂರೈಸಲು ರಿಲಯನ್ಸ್ ಡಿಫೆನ್ಸ್ ಕಂಪೆನಿಯನ್ನು ತನ್ನ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಈ ಹಿಂದೆಯೂ ಡಾಸೌಲ್ಟ್ ಆಯ್ಕೆಯಲ್ಲಿ ನಮ್ಮ ಕೈವಾಡವಿಲ್ಲ ಎಂದು ಫ್ರಾನ್ಸ್ ಸರಕಾರ ತಿಳಿಸಿದೆ.

‘ಮೇಕ್ ಇನ್ ಇಂಡಿಯಾ’ ನೀತಿಯಂತೆ ತಾನು ರಿಲಯನ್ಸ್ ಡಿಫೆನ್ಸ್ ಕಂಪೆನಿಯೊಂದಿಗೆ ಪಾಲುದಾರಿಕೆ ನಡೆಸಲು ನಿರ್ಧಾರ ಕೈಗೊಂಡಿದ್ದಾಗಿ ಡಾಸೌಲ್ಟ್ ಏವಿಯೇಶನ್ ಕಂಪೆನಿ ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News