ಮರಣ ಪತ್ರ ಬರೆದಿಟ್ಟು ಸಾಯುವುದನ್ನು ನಾವು ನಂಬುವುದಿಲ್ಲ ಎಂದ ಸಚಿವ ಮನಗೂಳಿ

Update: 2018-09-22 13:10 GMT

ದಾವಣಗೆರೆ,ಸೆ.22: ಮರಣ ಪತ್ರ ಬರೆದಿಟ್ಟು ಸಾಯವುದನ್ನು ನಾವು ನಂಬುವುದಿಲ್ಲ. ಯಾವ ಕಾರಣಕ್ಕೆ ಸತ್ತಿದ್ದಾರೆ ಎನ್ನುವ ವರದಿ ಬರಬೇಕು. ನಂತರ ಎಫ್‍ಐಆರ್ ಮತ್ತು ವೈದ್ಯರ ವರದಿ ಬಂದು ಎಲ್ಲ ದಾಖಲೆಗಳು ಪರಿಶೀಲನೆಯಾದ ಮೇಲೆ ಐದಾರು ಲಕ್ಷ ಪರಿಹಾರ ಕೊಡಲಾಗುವುದು ಎಂದು ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಹೇಳಿದ್ದಾರೆ. 

ಮಂಡ್ಯದಲ್ಲಿ ನಡೆದ ರೈತ ಕುಟುಂಬ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬರೆದಿಟ್ಟ ಮರಣ ಪತ್ರವನ್ನು  ನಾವು ನಂಬುವುದಿಲ್ಲ. ಅವರು ಯಾವುದೋ ಕಾರಣಕ್ಕೆ ಮರಣ ಪತ್ರ ಬರೆದಿರುತ್ತಾರೆ. ಹಾಗಾದರೆ ನಾಳೆ ನಾನು ಸಾಯುತ್ತೇನೆ. ಏನೋ ಕಾರಣ ಹೇಳುತ್ತೇನೆ. ಅದನ್ನೆಲ್ಲ ನಂಬುವುದಕ್ಕಾಗುತ್ತಾ ಎಂದು ಮಾದ್ಯಮದವರಿಗೆ ಸಚಿವ ಮನಗೂಳಿ ಪ್ರಶ್ನಿಸಿದ್ದಾರೆ.

ಸತ್ತವರಿಗೆ ಹಾಗೆ ಹಣ ಕೊಡುತ್ತಾ ಹೋಗುವುದು ಸರಿಯಲ್ಲ. ಸಾಯುವರರನ್ನು ತಡೆಯುವುದಕ್ಕಾಗಲ್ಲ. ಅವರು ವಿಷ ಕುಡಿದರೆ ನಾವೇನು ಮಾಡುವುದು.  ಕುಮಾರಸ್ವಾಮಿಗೆ ಏನೂ ಮಾಡಕ್ಕಾಗಲ್ಲ. ನಾನು, ನೀವು ಏನು ಮಾಡಕ್ಕಾಗಲ್ಲ. ಮುಂದೆ ಈ ಬಗ್ಗೆ ಸಿಎಂ ಬಳಿ ಮಾತನಾಡುತ್ತೇನೆ ಎಂದು ಸಚಿವ ಎಂ.ಸಿ ಮನಗೂಳಿ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News