ನೈತಿಕ ಮೌಲ್ಯಗಳಿಲ್ಲದ ಧಾರಾವಾಹಿಗಳು

Update: 2018-09-24 18:31 GMT

ಮಾನ್ಯರೇ,

ಸಂಜೆ ಹೊತ್ತು ಸ್ವಲ್ಪಮನರಂಜನೆಗೆಂದು ಟಿ.ವಿ. ಮುಂದೆ ಕುಳಿತರೆ ಬರೀ ಮೆಗಾಧಾರಾವಾಹಿಗಳದೇ ಭರಾಟೆ. ಅದೂ ಎಂತೆಂತಹ ಧಾರಾವಾಹಿಗಳು! ಮೂಢನಂಬಿಕೆ, ವಿವಾಹೇತರಸಂಬಂಧ, ಬಹುಪತ್ನಿತ್ವದ ವೈಭವೀಕರಣ, ಹೆತ್ತತಾಯಿ-ಮಗಳ ದ್ವೇಷ ಮತ್ತು ಬಾಲ್ಯವಿವಾಹದಂತಹ ನೈಜ-ನೈತಿಕ ಮೌಲ್ಯಗಳ ಅರಿವೇ ಇಲ್ಲದ ಧಾರಾವಾಹಿಗಳು. ಸಮಾಜದ ಮೇಲೆ ಅವುಗಳ ಪರಿಣಾಮ ಮಾತ್ರ ಭೀಕರವಾದದ್ದು.
 ಇತ್ತೀಚೆಗೆ ಟಿ.ವಿ ಧಾರಾವಾಹಿಗಳಿಂದ ಮನರಂಜನೆ ಮಾಯವಾಗಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದೆ ಎಂಬುದಂತೂ ಅಕ್ಷರಶಃ ಸತ್ಯ. ಎಲ್ಲಾ ಭಾಷೆಯ ಚಾನೆಲ್ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಬಹುಪತ್ನಿತ್ವ ಮತ್ತು ವಿವಾಹೇತರ ಸಂಬಂಧದಂತಹ ವಿಷಯಗಳ ಸುತ್ತವೇ ಸುತ್ತುತ್ತಿರುತ್ತವೆೆ. ಬಹುಪಾಲು ಧಾರಾವಾಹಿಗಳು ಶುರುವಾಗುವುದು ಇಂತಹ ಅಸಂಬದ್ಧ ಪ್ರಲಾಪಗಳಿಂದಲೇ. ಧಾರಾವಾಹಿಗಳ ನಿರ್ದೇಶಕರಿಗೆ ಧಾರಾವಾಹಿ ಮಾಡಲು ಇಂತಹ ವಿಷಯಗಳನ್ನು ಬಿಟ್ಟು ಬೇರೆ ವಿಷಯವೇ ಸಿಗುವುದಿಲ್ಲವೇ?
ಕಾನೂನಿಗೆ ವಿರುದ್ಧ ಎಂದು ಗೊತ್ತಿದ್ದರೂ ಇಂತಹ ಅಂಶಗಳಿರುವ ಧಾರಾವಾಹಿಗಳೇ ಹೆಚ್ಚಾಗಲು ಕಾರಣವೇನು. ವೀಕ್ಷಕರು ಪ್ರೋತ್ಸಾಹ ಕೊಟ್ಟಷ್ಟು ಇಂತಹ ಧಾರಾವಾಹಿಗಳು ಹೆಚ್ಚುತ್ತಿವೆೆ. ವೀಕ್ಷಕರು ಇಂತಹ ಧಾರಾವಾಹಿಗಳ ವಿರುದ್ಧ ಸಿಡಿದೇಳಬೇಕು. ಪ್ರತಿಭಟನೆ ಮಾಡದೇ, ಇದರ ವಿರುದ್ಧ ಧ್ವನಿ ಎತ್ತದೇ ಇಂತಹ ಧಾರಾವಾಹಿಗಳ ನಿಷೇಧ ಅಸಾಧ್ಯ. ಭಾರತದ ಶ್ರೇಷ್ಠ ಸಂಸ್ಕೃತಿಯನ್ನು, ಆಚಾರ ವಿಚಾರಗಳನ್ನು ಹಾಳುಗೆಡವುತ್ತಿರುವ ಇಂತಹ ಧಾರಾವಾಹಿಗಳ ವಿರುದ್ಧ ಈಗಲಾದರೂ ಎಚ್ಚೆತ್ತು ಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ, ಇಂತಹ ಧಾರಾವಾಹಿಗಳ ಪ್ರಭಾವಕ್ಕೊಳಗಾಗಿ ಮುಂದೊಂದು ದಿನ ನೈತಿಕ ಮೌಲ್ಯಗಳೇ ಇಲ್ಲದ ಅಪಾಯಕಾರಿ ಸಮಾಜ ನಿರ್ಮಾಣವಾಗುವುದಂತೂ ಖಚಿತ. ಸರಕಾರ ಕೂಡಲೇ ಇಂತಹ ಧಾರಾವಾಹಿಗಳ ವಿರುದ್ಧ ಕಟ್ಟುನಿಟ್ಟಾದ ಕಾನೂನುಕ್ರಮಗಳನ್ನು ಜಾರಿಗೊಳಿಸಬೇಕು.

Writer - ಅಂಕಿತಾ ಕಾರ್ನಾಡ್,ಮುಲ್ಕಿ

contributor

Editor - ಅಂಕಿತಾ ಕಾರ್ನಾಡ್,ಮುಲ್ಕಿ

contributor

Similar News