ಮುಂಡಗೋಡ: ಪಾಳಾ ಪ್ರಾಥಮಿಕ ಶಾಲೆ ಶಿಕ್ಷಕಿಗೆ ಎಚ್1ಎನ್1

Update: 2018-09-27 17:45 GMT

ಮುಂಡಗೋಡ, ಸೆ.27: ಪಾಳಾ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಗೆ ಎಚ್1ಎನ್1 ಇರುವುದು ದೃಡಪಟ್ಟಿದೆ ಎಂದು ಮುಂಡಗೋಡ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ ಪತ್ರಿಕೆಗೆ ತಿಳಿಸಿದ್ದಾರೆ.

ಈ ಕುರಿತು ವೈದ್ಯರನ್ನು ಭೇಟಿಯಾಗಿ ವಿಚಾರಿಸಿದಾಗ ಅವರು ವಿಷಯ ತಿಳಿಸಿದರು. ಶಾಲಾ ಶಿಕ್ಷಕಿಯು ಮುಂಡಗೋಡ ಪಟ್ಟಣದ ಕಲಾಲ ಓಣಿಯ ನಿವಾಸಿ ಎಂದು ಹೇಳಲಾಗಿದೆ

‘ಶಿಕ್ಷಕಿಯು ನೆಗಡಿ ಕೆಮ್ಮು ಜ್ವರಕ್ಕೆ ತಮ್ಮಲ್ಲಿ ಚಿಕಿತ್ಸೆ ಪಡೆದು, ಕಾಯಿಲೆಯು ಕಡಿಮೆ ಆಗದೇ ಇರುವುದನ್ನು ಕಂಡು ಎಚ್1ಎನ್1 ಬಗ್ಗೆ ಸಂಶಯಪಟ್ಟು ತಾನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ತೆರಳಲು ಸೂಚಿಸಿದ್ದೆ. ಆದರೆ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಕ್ಷಕಿಯು ತೀವ್ರ ನಿಗಾ ಘಟಕದಿಂದ ಸಾಮಾನ್ಯ ವಾರ್ಡ್‌ಗೆ ವರ್ಗಾವಣೆಗೊಂಡಿದ್ದಾರೆ, ಗುಣಮುಖರಾಗುತ್ತಿದ್ದಾರೆ’ಎಂದು ಹೇಳಿದರು.

ಶಿಕ್ಷಕಿಗೆ ಎಚ್1ಎನ್1 ದೃಡಪಟ್ಟಿರುವುದರಿಂದ ಕಲಾಲ ಓಣಿಯಲ್ಲಿ ಹಾಗೂ ಶಿಕ್ಷಕಿ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ ಜಾಗೃತಿ ಮೂಡಿಸಲಾಗಿದೆ ಅಲ್ಲದೆ ಶಾಲೆಯ ಮಕ್ಕಳ ತಪಾಸಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News