ಹನೂರು: ವನ್ಯಜೀವಿ ಸಪ್ತಾಹ ಕಾರ್ಯಕ್ರಮ

Update: 2018-10-04 15:03 GMT

ಹನೂರು,ಅ.4: ಅರಣ್ಯ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಮಲೈಮಹದೇಶ್ಚರ ವನ್ಯಜೀವಿ ವಲಯದ ಸಹಾಯಕ ಸಂರಕ್ಷಣಾಧಿಕಾರಿ ಪ್ರಶಾಂತ್‍ಕುಮಾರ್ ತಿಳಿಸಿದರು.

ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ಮಲೈಮಹದೇಶ್ವರ ವನ್ಯಜೀವಿ ವಲಯದ ವತಿಯಿಂದ ಮಹದೇಶ್ವರ ಪ್ರೌಡಶಾಲೆಯಲ್ಲಿ 64ನೇ ವನ್ಯಜೀವಿ ಸಪ್ತಾಹ 2018ರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಪ್ರಾಣಿ ಅದರ ಉಳಿವಿಗಾಗಿ ಮತ್ತೊಂದು ಪ್ರಾಣಿ ಮೇಲೆ ಅವಲಂಬಿತವಾಗಿದ್ದು, ಇದು ಪ್ರಕೃತಿಯಲ್ಲಿ ಆಹಾರ ಸರಪಳಿಯ ಜಾಲವಾಗಿದೆ. ಒಂದು ವೇಳೆ ಪ್ರಾಣಿಗಳು ಆಹಾರಕ್ಕಾಗಿ ಒಂದರ ಮೇಲೆ ಅವಲಂಬಿತರಾಗದೇ ಇದ್ದಲ್ಲಿ, ಕಾಡು ಪ್ರಾಣಿಗಳು ಆಹಾರವನ್ನು ಹರಸಿ ನಾಡಿನತ್ತ ಬಂದು ಮನುಷ್ಯನ ಮೇಲೆ ದಾಳಿ ಮಾಡುತ್ತಿದ್ದವು. ಆದ್ದರಿಂದ ಅರಣ್ಯ ಸಂಪತ್ತಿನ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಮಲೈಮಹದೇಶ್ವರ ಪ್ರೌಡಶಾಲೆಯ ಮುಖ್ಯೋಪದಾಯ ಶಿವಮಲ್ಲಪ್ಪ, ಉಪವಲಯ ಅರಣ್ಯಾಧಿಕಾರಿ ಶ್ರೀದರ್ ಮೂರ್ತಿ, ಸಿಎಂ ಪುಟ್ಟಸ್ವಾಮಿ, ದರ್ಮರಾಜ ಗುತ್ತೆದಾರ, ಮಂಜುನಾಥ, ಸಿದ್ದಪ್ಪ, ಸಮೀರ್ ಭಾಗವಾನ್, ಅರಣ್ಯ ರಕ್ಷಕರು, ಸಿಬ್ಬಂದಿಗಳು, ಮತ್ತು ಕಾಲೇಜಿನ ಭೋದಕ ವರ್ಗದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News