ಸ್ವಾತಂತ್ರ್ಯಕ್ಕಾಗಿ ಬಿಜೆಪಿ, ಆರೆಸ್ಸೆಸ್ ನಾಯಕರ ಮನೆಯ ಒಂದು ನಾಯಿ ಕೂಡ ಪ್ರಾಣ ಬಿಟ್ಟಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2018-10-05 09:25 GMT

ಹೊಸದಿಲ್ಲಿ, ಅ.5: “ಆರೆಸ್ಸೆಸ್ ಹಾಗೂ ಬಿಜೆಪಿ ನಾಯಕರ ಮನೆಗಳ ಒಂದು ನಾಯಿ ಕೂಡ  ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಿಟ್ಟಿಲ್ಲ'' ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯಲ್ಲಿನ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಗುರುವಾರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಫೈಝ್‍ಪುರ್ ಎಂಬಲ್ಲಿ ಪಕ್ಷದ ಜನ ಸಂಘರ್ಷ್ ಯಾತ್ರಾದ ಎರಡನೇ ಹಂತದ ಉದ್ಘಾಟನೆ ನಿಮಿತ್ತ ಆಯೋಜಿಸಲಾಗಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ``ನಾವು (ಕಾಂಗ್ರೆಸ್) ದೇಶಕ್ಕಾಗಿ ನಮ್ಮ ಪ್ರಾಣ ಮುಡಿಪಾಗಿಸಿದ್ದೇವೆ ಹಾಗೂ ಬಲಿದಾನಗಳನ್ನು ಮಾಡಿದ್ದೇವೆ. ಇಂದಿರಾ ಗಾಂಧಿ ದೇಶದ ಏಕತೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು, ರಾಜೀವ್ ಗಾಂಧಿ ಕೂಡ ದೇಶಕ್ಕಾಗಿ ತಮ್ಮ ಪ್ರಾಣ ನೀಡಿದರು.  ಬಿಜೆಪಿ, ಆರೆಸ್ಸೆಸ್ ನಾಯಕರ ಮನೆಗಳಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ  ಒಂದು ನಾಯಿ ಕೂಡ ಸತ್ತಿದೆಯೇ?'' ಎಂದು ಪ್ರಶ್ನಿಸಿದರು. ``ನಿಮ್ಮ ಎಷ್ಟು ಮಂದಿ ಸ್ವಾತಂತ್ರ್ಯ ಹೋರಾಟದ ಸಂದರ್ಭ ಜೈಲಿಗೆ ಹೋಗಿದ್ದರು ?'' ಎಂದೂ ಖರ್ಗೆ ಪ್ರಶ್ನಿಸಿದರು.

ಕಳೆದ ಫೆಬ್ರವರಿಯಲ್ಲಿ ಇಂತಹುದೇ ಹೇಳಿಕೆ ನೀಡಿದ್ದ ಖರ್ಗೆ ನಂತರ ಪ್ರಧಾನಿಯಿಂದ ತರಾಟೆಗೊಳಗಾಗಿದ್ದರು. ``ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಹಾಗೂ ಚಂದ್ರ ಶೇಖರ್ ಆಜಾದ್ ಕೊಡುಗೆಗಳ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಕೇವಲ ಒಂದು ಕುಟುಂಬ ನಮಗೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿದೆ ಎಂದು ಅವರು ತಿಳಿದಿದ್ದಾರೆ'' ಎಂದು ಪ್ರಧಾನಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News