ಕಾಂಗ್ರೆಸ್‍ನಲ್ಲಿ ನಿಷ್ಠಾವಂತರಿಗೆ ಮನ್ನಣೆಯಿದೆ: ಸಚಿವ ಪುಟ್ಟರಂಗಶೆಟ್ಟಿ

Update: 2018-10-05 12:15 GMT

ತುಮಕೂರು,ಅ.05: ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಂತರಾಗಿ ಯಾರು ಶ್ರಮಿಸುತ್ತಾರೊ ಅಂತಹವರಿಗೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಸ್ಥಾನಮಾನ ಲಭಿಸುವುದು ನಿಶ್ಚಿತ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.

ಸರಕಾರಿ ಕಾರ್ಯಕ್ರಮದ ಅಂಗವಾಗಿ ತುಮಕೂರಿಗೆ ಭೇಟಿ ನೀಡಿದ್ದ ವೇಳೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಲ್ಲಿ ಸಂಘಟಿತನಾಗಿ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿ, ಪಟ್ಟಣ ಪಂಚಾಯತ್ ಸದಸ್ಯನಾಗಿ, 2 ಬಾರಿ ಗ್ರಾಮ ಪಂ. ಸದಸ್ಯನಾಗಿ, 2 ಬಾರಿ ಜಿಲ್ಲಾ ಪಂ. ಸದಸ್ಯನಾಗಿ ಮತ್ತು 3 ಬಾರಿ ಶಾಸಕನಾಗಿ ಈಗ ಮಂತ್ರಿಯಾಗಿದ್ದೇನೆ. ಪಕ್ಷನಿಷ್ಠೆನಾಗಿ ದುಡಿದ ಪರಿಣಾಮ ನನಗೆ  ಮಂತ್ರಿ ಪದವಿ ಲಭಿಸಿದೆ ಎಂದರು.

ಸಮಾಜದ ಕಟ್ಟ ಕಡೆಯ ಸಮುದಾಯಗಳಿಗೂ ಸಹ ನ್ಯಾಯ ಕೊಡುವಂತಹ ಪಕ್ಷ ಕಾಂಗ್ರೆಸ್. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ದೇಶದ ಪ್ರಧಾನಿ ಯನ್ನಾಗಿ ಮಾಡುವುದಕ್ಕೆ ನಾವೆಲ್ಲರೂ ಶ್ರಮಿಸಬೇಕಿದೆ. ಹಿಂದುಳಿದ ವರ್ಗದ ಇಲಾಖೆಯಲ್ಲಿ ಸಾಕಷ್ಟು ಬಡವರಿಗೆ ಸಹಾಯ ಮಾಡುವ ಅವಕಾಶ ನನಗೆ ಸಿಕ್ಕಿದ್ದು, ಪಕ್ಷದ ಋಣ ತಿರಿಸುತ್ತೇನೆ. ಇಂದು ಹೊರ ದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವಂತ ಮಕ್ಕಳಿಗೆ ಸ್ಕಾಲರ್‍ಶಿಫ್ ನಂತರ ನರ್ಸಿಂಗ್, ಇಂಜಿನಿಯರಿಂಗ್ ಹೀಗೆ ಅನೇಕ ವಿದ್ಯಾಭ್ಯಾಸ ಮಾಡುವಂತಹ ವಿದ್ಯಾರ್ಥಿಗಳಿಗೆ 2 ಲಕ್ಷಗಳಿಂದ 10 ಲಕ್ಷಗಳ ವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲಾಧ್ಯಕ ಹೆಚ್. ಕೆಂಚಮಾರಯ್ಯ ಸಚಿವರನ್ನು ಅಭಿನಂದಿಸಿ ಮಾತನಾಡಿದರು. ಈ ವೇಳೆ ಕೆಪಿಸಿಸಿ ಸದಸ್ಯ ದಿನೇಶ್, ಉಪಾಧ್ಯಕ್ಷ ಶಿವಮೂರ್ತಿ, ಮರಿಚಿನ್ನಮ್ಮ, ನರಸಿಯಪ್ಪ, ಚಂದ್ರಶೇಖರ್ ಗೌಡ್ರು, ಕೆಂಪಣ್ಣ,ಮಹಾನಗರ ಪಾಲಿಕೆ ಸದಸ್ಯರುಗಳಾದ ಫರೀದ ಬೇಗಂ, ಇನಾಯತ್ ಉಲ್ಲಾಖಾನ್, ನಾಗಮಣಿ, ಸೌಭಾಗ್ಯ, ಸಂಜೀವ್ ಸುಂದರ್ ಕುಮಾರ್, ಜಾರ್ಜ್, ಶ್ರೀನಿವಾಸ, ನರಸಿಂಹಮೂರ್ತಿ, ಇದಾಯತ್, ಮಧುಸೂದನ್, ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News