ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಬಹುದು: ಅರುಣ್ ಜೇಟ್ಲಿ

Update: 2018-10-06 10:31 GMT

ಹೊಸದಿಲ್ಲಿ, ಅ.6: ಆಧಾರ್ ಸಂಖ್ಯೆಯನ್ನು ಮೊಬೈಲ್ ಫೋನ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳೊಂದಿಗೆ ಜೋಡಿಸುವುದನ್ನು  ಸಂಸತ್ತಿನ ಮೂಲಕ ಅನುಮೋದಿಸಲ್ಪಟ್ಟ ಕಾನೂನಿನಿಂದ ಕಡ್ಡಾಯಗೊಳಿಸಬಹುದಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಆದರೆ ಸರಕಾರ ಇಂತಹ ಒಂದು ಕಾನೂನನ್ನು ಜಾರಿಗೊಳಿಸುವುದೇ ಎಂಬುದನ್ನು ಮಾತ್ರ ಜೇಟ್ಲಿ ಸ್ಪಷ್ಟ ಪಡಿಸಿಲ್ಲ.

ಆಧಾರ್ ಸಂವಿಧಾನ ಬದ್ಧತೆಯನ್ನು ಕಳೆದ ತಿಂಗಳು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ ಅದೇ ಸಮಯ ಟೆಲಿಕಾಂ ಕಂಪೆನಿಗಳು ಹಾಗೂ ಇತರ ಖಾಸಗಿ ಸಂಸ್ಥೆಗಳು ಮೊಬೈಲ್ ಫೋನ್ ಬಳಕೆದಾರರ ಗುರುತನ್ನು ದೃಢೀಕರಿಸಲು ಆಧಾರ್ ಉಪಯೋಗಿಸುವುದನ್ನು ನಿರ್ಬಂಧಿಸಿತ್ತು.

``ಆಧಾರ್ ಸಂವಿಧಾನಬದ್ಧತೆಯನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್ ಉತ್ತಮ ತೀರ್ಪು ನೀಡಿದೆ, ಆದರೆ ಖಾಸಗಿ ಕಂಪೆನಿಗಳು ಅದನ್ನು ಉಪಯೋಗಿಸುವಂತಿಲ್ಲ. ಆದರೆ ಕಾನೂನು ಅಥವಾ ಒಪ್ಪಂದದ ಮೂಲಕ ಇತರರಿಗೆ ಈ ಅಧಿಕಾರವನ್ನು ನೀಡಲು ಸೆಕ್ಷನ್ 57 ಇದೆ'' ಎಂದ ಜೇಟ್ಲಿ, ಆದಾಯ ತೆರಿಗೆ ರಿಟರ್ನ್ಸ್ ಗಾಗಿಯೂ ಆಧಾರ್ ಜೋಡಣೆಯನ್ನು ನ್ಯಾಯಾಲಯ ಅನುಮತಿಸಿದೆ ಎಂದು ಹೇಳಿದರು. ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಯೊಂದಿಗೆ ಜೋಡಿಸುವುದರಿಂದ ಆಗುವ ಪ್ರಯೋಜನಗಳನ್ನು ಅರಿತರೆ ಅದು ಕೂಡ ಸಾಧ್ಯವಾಗುವುದು, ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳು ಪ್ರಮುಖವಾಗಿ ಇದರಲ್ಲಿ ಒಳಗೊಳ್ಳಬೇಕಿದೆ'' ಎಂದು ಜೇಟ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News