ಮೂಡಿಗೆರೆ: ಮಕ್ಕಾ, ಮದೀನ ಯಾತ್ರಿಕರ ತರಬೇತಿ ಶಿಬಿರ

Update: 2018-10-09 11:53 GMT

ಮೂಡಿಗೆರೆ, ಅ.9: ಪವಿತ್ರ ಹಜ್ ಹಾಗೂ ಉಮ್ರಾ ಯಾತ್ರೆ ಕೈಗೊಳ್ಳುವವರು ತಮ್ಮ ಜೀವನದಲ್ಲಿ ಪರಿಶುದ್ಧತೆಯ ಪ್ರತೀಕವಾದ ಜೀವನಕ್ಕಾಗಿ ದೇವರ ಮೊರೆ ಹೋಗುವವರಾಗಿರುತ್ತಾರೆ ಎಂದು ಪುತ್ತೂರಿನ ಮುಕ್ವೆ ಜುಮ್ಮಾ ಮಸೀದಿ ಖತೀಬ್ ಶರೀಫ್ ಅರ್ಷದಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯ ಶಂಸುಲ್ ಉಲಮಾ ಭವನದಲ್ಲಿ ಅಜ್‍ಯದ್ ಸಂಸ್ಥೆಯಿಂದ ಆಯೋಜಿಸಿದ್ದ ಮಕ್ಕಾ., ಮದೀನ ಯಾತ್ರಿಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಾ, ಮದೀನಗಳಿಗೆ ತೆರಳಲು ಸಾಧ್ಯವಾಗದ ಎಷ್ಟೋ ಅಗರ್ಭ ಶ್ರೀಮಂತರು ನಮ್ಮ ಮುಂದೆ ಇದ್ದಾರೆ. ಕೈಯಲ್ಲಿ ಹಣವಿಲ್ಲದ ಬಡ ವರ್ಗದವರು ಹಜ್ ಹಾಗೂ ಉಮ್ರಾ ಯಾತ್ರೆ ಕೈಗೊಂಡವರೂ ಇದ್ದಾರೆ. ಮಕ್ಕಾ ಮದೀನಗಳಿಗೆ ಯಾತ್ರೆ ತೆರಳಬೇಕೆಂದು ಹೊರಟವರಿಗೆ ಹಣದ ಕೊರತೆ ಕರಣವಾಗಿಲ್ಲ. ದೇವರ ಅನುಗ್ರಹವಿದ್ದರೆ ನಿರ್ಗತಿಕರೂ ಕೂಡ ಯಾತ್ರೆ ಕೈಗೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಬದ್ರಿಯಾ ಮಸೀದಿ ಖತೀಬ್ ಯಾಕೂಬ್ ದಾರಿಮಿ ದುವಾ ನೆರವೇರಿಸಿ ಮಾತನಾಡಿ, ಜೀವನಲ್ಲಿ ಮನುಷ್ಯನಿಗೆ ಕಷ್ಟಗಳು ಹಾಗೂ ರೋಗಗಳು ಬರುವುದು ಸಹಜ. ಕೆಲ ಪವಿತ್ರ ಕ್ಷೇತ್ರಗಳಿಗೆ ತೆರಳಿ ಜೀವನದ ಉದ್ದೇಶ ಈಡೇರಿಕೆಗಾಗಿ ಪ್ರಾಥನೆ ಸಲ್ಲಿಸಿ ಸಂತುಷ್ಟರಾದರೆ ಜೀವನದ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗುವುದು. ಪವಿತ್ರ ಕ್ಷೇತ್ರ ಮಕ್ಕಾ ಮತ್ತ ಮದೀನಗಳಿಗೆ ಯಾತ್ರೆ ತೆರಳಿ ಅಲ್ಲಿ ಹಜ್ ಮತ್ತು ಉಮ್ರಾ ನಿರ್ವಹಿಸಿದರೆ ತಮ್ಮ ಜೀವನದ ಉದ್ದೇಶ ಈಡೇರುವುದು ಗ್ಯಾರಂಟಿ ಎಂದು ಹೇಳಿದರು.

ಚಿಕ್ಕಮಗಳೂರು, ಹಾಸನ, ಮಂಗಳೂರು ಜಿಲ್ಲೆಗಳ ಉಮ್ರಾ ಯಾತ್ರಿಕರು ಶಿಬಿರದಲ್ಲಿ ಬಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಜ್‍ಯದ್ ಸಂಸ್ಥೆ ಧರ್ಮಗುರು ಸಲೀಂ ಪೈಝಿ ಇರ್ಫಾನಿ ಉಮ್ರಾ ಯಾತ್ರೆ ಮಹತ್ವವನ್ನು ವಿವರಿಸಿದರು.
ಕರ್ನಾಟಕ ಬ್ಯಾರಿ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಕಿತ್ತಲೇಗಂಡಿ ಜುಮ್ಮ ಮಸೀದಿ ಅಧ್ಯಕ್ಷ ಪೊಡಿಯಬ್ಬ, ಮುಖಂಡರಾದ ಇಸ್ಮಾಯಿಲ್ ಅಜಾದ್ ಹಾಜಿ, ಕೆ.ಎಸ್.ಇಬ್ರಾಹಿಂ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News