ಶಕುನಿ ಮಾಮಾ ಬಿಜೆಪಿಯಲ್ಲೆ ಇದ್ದಾನೆ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Update: 2018-10-10 14:00 GMT

ಕಲಬುರ್ಗಿ, ಅ. 10: ‘ಧೃತರಾಷ್ಟ್ರ, ಧುರ್ಯೋಧನ ಕಾಂಗ್ರೆಸ್‌ನಲ್ಲಿದ್ದರೆ, ಶಕುನಿ ಮಾಮಾ ಬಿಜೆಪಿಯಲ್ಲೆ ಇದ್ದಾನೆ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ್ ವಿರುದ್ಧ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.

ಬುಧವಾರ ಅಫ್ಜಲ್‌ಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಧೃತರಾಷ್ಟ್ರ, ಪ್ರಿಯಾಂಕ್ ಖರ್ಗೆ ದುರ್ಯೋಧನ’ ಎಂಬ ಮಾಲಿಕಯ್ಯ ಗುತ್ತೇದಾರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. 'ಧಿಮಾಕಿನಿಂದ ಬಂದ ವ್ಯಕ್ತಿಗೆ ಜನತೆ ಬುದ್ಧಿ ಕಲಿಸಿದ್ದಾರೆ. ಬಿಜೆಪಿ ಮುಖಂಡರೇ ದಯವಿಟ್ಟು ತಿಳಿದುಕೊಳ್ಳಿ, ಮಾಲೀಕಯ್ಯ ಗುತ್ತೇದಾರ್ ಅವರನ್ನು ಇಟ್ಟುಕೊಂಡು ನೀವು ಮತ ಪರಿವರ್ತನೆ ಮಾಡುತ್ತೇವೆಂದು ಭಾವಿಸಿದ್ದರೆ ಅದು ನಿಮ್ಮ ಭ್ರಮೆಯಷ್ಟೇ. ನಿಮ್ಮ ಮನೋಭಿಲಾಷೆ ಈಡೇರುವುದಿಲ್ಲ ಎಂದು ಬಿಜೆಪಿಯವರನ್ನು ಎಚ್ಚರಿಸಿದರು.

ಸರಕಾರವೇನು ವಿಮಾನವೇ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಟೇಕ್ ಆಫ್ ಆಗಿಲ್ಲ, ಟೇಕ್ ಆಫ್ ಆಗಿಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಟೇಪ್ ಆಫ್ ಆಗಲು ಸರಕಾರವೇನು ವಿಮಾನವೇ ಎಂದು ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದರು.

ಮೈತ್ರಿ ಸರಕಾರ ಟೇಕ್ ಆಫ್ ಆಗಿಲ್ಲವೆಂದು ಹೇಳುತ್ತಾರೆ ಬಿಜೆಪಿ ಮುಖಂಡರು. ಆದರೆ, ಪ್ರಧಾನಿ ನರೇಂದ್ರ ಮೋದಿ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದರಲ್ಲೆ ಇದ್ದು, ಒಂದೇ ಒಂದು ಯೋಜನೆಯನ್ನು ಅನುಷ್ಟಾನ ಮಾಡುತ್ತಿಲ್ಲ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News