ಭಾರತಕ್ಕೆ ಹೆಚ್ಚುವರಿ ತೈಲ ಪೂರೈಕೆ ಮಾಡಲಿರುವ ಸೌದಿ ಅರೇಬಿಯ

Update: 2018-10-10 16:37 GMT

ಹೊಸದಿಲ್ಲಿ, ಅ.10: ಜಗತ್ತಿನ ಅತ್ಯಂತ ದೊಡ್ಡ ತೈಲ ರಫ್ತುದಾರನಾಗಿರುವ ಸೌದಿ ಅರೇಬಿಯ ನವಂಬರ್‌ನಲ್ಲಿ ಭಾರತಕ್ಕೆ ನಾಲ್ಕು ಮಿಲಿಯನ್ ಬ್ಯಾರೆಲ್ ಹೆಚ್ಚುವರಿ ತೈಲವನ್ನು ಪೂರೈಕೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೆಟ್ರೋಲಿಯಂ ರಫ್ತುದಾರ ದೇಶಗಳ ಸಂಘಟನೆ (ಒಪೆಕ್)ನಲ್ಲಿ ಮೂರನೇ ಅತೀಹೆಚ್ಚು ತೈಲ ಉತ್ಪಾದಕ ದೇಶವಾಗಿರುವ ಇರಾನ್ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನ ನವಂಬರ್ 4ರಿಂದ ಸಂಪೂರ್ಣವಾಗಿ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಭಾರತ ಅನುಭವಿಸಬೇಕಾಗುವ ತೈಲ ಕೊರತೆಯನ್ನು ನೀಗಿಸಲು ಸೌದಿ ಅರೇಬಿಯ ಉತ್ಸುಕವಾಗಿರುವುದು ಅರಬ್ ದೇಶದ ಈ ನಡೆಯಿಂದ ಸ್ಪಷ್ಟವಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

ಚೀನಾದ ನಂತರ ಭಾರತವೇ ಇರಾನ್‌ನ ಅತೀದೊಡ್ಡ ತೈಲ ಗ್ರಾಹಕ ದೇಶವಾಗಿದೆ. ಆದರೆ ಅಮೆರಿಕದ ದಿಗ್ಬಂಧನದ ಪರಿಣಾಮವಾಗಿ ಭಾರತೀಯ ಸಂಸ್ಥೆಗಳು ಇರಾನ್ ತೈಲವನ್ನು ಖರೀದಿಸುವುದನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ. ರಿಲಾಯನ್ಸ್ ಇಂಡಸ್ಟ್ರೀಸ್ ಲಿ., ಹಿಂದೂಸ್ಥಾನ್ ಪೆಟ್ರೋಲಿಯಂ ಕೋರ್ಪ್, ಭಾರತ್ ಪೆಟ್ರೋಲಿಯಂ ಕೋರ್ಪ್ ಮತ್ತು ಮಂಗಳೂರು ರಿಫೈನರಿ ಪೆಟ್ರೊಕೆಮಿಕಲ್ಸ್ ಲಿ. ನವಂಬರ್‌ನಿಂದ ಸೌದಿ ಅರೇಬಿಯದಿಂದ ಹೆಚ್ಚುವರಿ ಒಂದು ಮಿಲಿಯನ್ ಬ್ಯಾರೆಲ್ ತೈಲವನ್ನು ಖರೀದಿಸಲು ಮುಂದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News