ಕುಶಾಲನಗರ: ಸುಲಿಗೆ ಪ್ರಕರಣದ ಮೂವರು ಆರೋಪಿಗಳ ಬಂಧನ; 3 ಲಕ್ಷ ಮೌಲ್ಯದ ಸೊತ್ತು ವಶ

Update: 2018-10-10 19:02 GMT

ಮಡಿಕೇರಿ, ಅ.10 : ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸರು ಮೂವರು ಯುವಕರನ್ನು ಬಂಧಿಸಿ ರೂ. 3 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಪಟ್ಟಣದಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದ ಸಂದರ್ಭ ಮಾರುಕಟ್ಟೆ ರಸ್ತೆಯ ಬಳಿ ದ್ವಿಚಕ್ರ ವಾಹನದಲ್ಲಿ ಇದ್ದ ಇಬ್ಬರು ಯುವಕರು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದರು. ಅವರನ್ನು ಬೆನ್ನತ್ತಿ ವಶಕ್ಕೆ ಪಡೆದು ವಿಚಾರಿಸಿದ ಸಂದರ್ಭ ಎರಡು ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿವೆ.

ವಾಲ್ನೂರು ಅಮ್ಮಂಗಾಲ ಗ್ರಾಮದ ನಿತಿನ್‍ಕುಮಾರ್ (20), ಪಿರಿಯಾಪಟ್ಟಣ ತಾಲೂಕಿನ ಎಂ.ಹೊಸಳ್ಳಿಯ ಜಗತ್ (20), ಬೈಲುಕುಪ್ಪೆಯ ಹಂದಿಗುಡ್ಡ ನಿವಾಸಿ ಆಟೋ ಚಾಲಕ ಸುರೇಶ್ (24) ಎಂಬವರು ಬಂಧಿತ ಆರೋಪಿಗಳು. 

ಬಂಧಿತರಿಂದ 64 ಸಾವಿರ ರು ನಗದು, 35 ಸಾವಿರ ಮೌಲ್ಯದ ಕ್ಯಾಮರಾ, 30 ಸಾವಿರ ಮೌಲ್ಯದ 3 ಮೊಬೈಲ್‍ಗಳು, 5 ಸಾವಿರ ರೂ ಮೌಲ್ಯದ ಸ್ವೀಕರ್ ಸೆಟ್, 80 ಸಾವಿರ ಮೌಲ್ಯದ ದ್ವಿಚಕ್ರ ವಾಹನ (ಹೋಂಡ ಡಿಯೋ-ಕೆ.ಎ.12.ಎಸ್.1010), 90 ಸಾವಿರ ಮೌಲ್ಯದ ಆಟೋ ರಿಕ್ಷಾ (ಕೆ.ಎ.12.ಬಿ.0475) ಸೇರಿದಂತೆ ಒಟ್ಟು 3 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಡಿವೈಎಸ್‍ಪಿ ಮುರುಳೀಧರ್ ನೇತೃತ್ವದಲ್ಲಿ ತನಿಖಾಧಿಕಾರಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಪಿಎಸ್‍ಐ ಜಗದೀಶ್, ವಿಶೇಷ ಅಪರಾಧ ಪತ್ತೆ ದಳದ ದಯಾನಂದ್, ಸಜಿ, ಸುದೀಶ್‍ಕುಮಾರ್, ಮುಸ್ತಫಾ, ಜೋಸೆಫ್, ಸಂಪತ್‍ರೈ, ಸುದೀಶ್‍ಕುಮಾರ್, ಪ್ರಕಾಶ್, ಉದಯಕುಮಾರ್, ಸುರೇಶ್ ಮತ್ತು ಚಾಲಕರಾದ ಪ್ರವೀಣ್ ಸದರಿ ಆರೋಪಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News