ಮೂಡಿಗೆರೆ ಎಪಿಎಂಸಿ ಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕಾರ

Update: 2018-10-12 11:36 GMT

ಮೂಡಿಗೆರೆ, ಅ.12: ಇಲ್ಲಿನ ಎಪಿಎಂಸಿಯ ಅಧಿಕಾರವನ್ನು ಜೆಡಿಎಸ್ ಮತ್ತು ಬಿಜೆಪಿ ತಲಾ 20 ತಿಂಗಳ ಅವಧಿಗೆ ಹಂಚಿಕೊಂಡಿದ್ದು, ರಾಜ್ಯ ಮೈತ್ರಿಯನ್ನು ಮುರಿದು, ಹಿಂದಿನ ಬಿಜೆಪಿ ಅವಧಿಯಲ್ಲಿನ 20-20 ಅನುಸರಿಸಲಾಗಿದೆ.

ಮೊದಲ ಅವಧಿಗೆ ಜೆಡಿಎಸ್‍ನ ಸಂತೋಷ್ ಕಳಸ ಅಧ್ಯಕ್ಷ, ಗೋಪಾಲಗೌಡ ಹೊರಟ್ಟಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆಯಾಗಿದ್ದು, ಎರಡನೆ 20 ತಿಂಗಳ ಅವಧಿಯನ್ನು ಬಿಜೆಪಿಗೆ ಹಂಚಲಾಗಿದೆ.

ಸಮಿತಿಯು ಒಟ್ಟು 16 ಸದಸ್ಯರನ್ನು ಹೊಂದಿದ್ದು, ಚುನಾವಣೆ ಸಂದರ್ಭದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಕ್ಕಾಗಿ ಚಂದ್ರಶೇಖರ್ ಎಂಬವರ ಸದಸ್ಯತ್ವವನ್ನು ನ್ಯಾಯಲಯ ವಜಾಗೊಳಿಸಿದೆ. ಉಳಿದ 15 ಸದಸ್ಯರಲ್ಲಿ ನಡೆದ ಎರಡನೆ ಅವಧಿಯ ಚುನಾವಣೆಯಲ್ಲಿ ಐದು ಸ್ಥಾನ ಹೊಂದಿದ್ದ ಬಿಜೆಪಿ ಮೂರು ಸ್ಥಾನ ಹೊಂದಿದ್ದ ಜೆಡಿಎಸ್‍ಗೆ ಮೊದಲ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ. 7 ಸ್ಥಾನ ಹೊಂದಿದ್ದ ಕಾಂಗ್ರೆಸ್‍ಅನ್ನು ಅಧಿಕಾರದಿಂದ ಹೊರಗಿಟ್ಟಿದ್ದು ಕೆಲವೇ ಸ್ಥಾನ ಹೊಂದಿದ್ದ ಜೆಡಿಎಸ್ ಅಧಿಕಾರಕ್ಕಾಗಿ ಜಾಣ್ಮೆ ಮೆರೆದಂತಾಗಿದೆ.

ಚುನಾವಣೆ ನಂತರ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಸಕ ಕುಮಾರಸ್ವಾಮಿ, ಕೃಷಿ ಉತ್ಪನ್ನ ಮಾರುಕಟ್ಟೆಯ ಅಡಳಿತ ಕಾರಣಾಂತರದಿಂದಾಗಿ ಕಳಸ ಭಾಗಕ್ಕೆ ಎಪಿಎಂಸಿ ಅಧಿಕಾರ ಪ್ರತೀ ಬಾರಿ ಕೈ ತಪ್ಪಿತ್ತು. ಈ ಬಾರಿ ಮತ್ತೆ ಮೈತ್ರಿ ಮೂಲಕ ಕಳಸ ಭಾಗಕ್ಕೆ ಅಧಿಕಾರ ಸಿಕ್ಕಿದೆ. ಎರಡು ಪಕ್ಷದ ಸದಸ್ಯರು ಸಮನ್ವಯದಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಮತ್ತು ಹೊಸ ಅದಾಯ ಮೂಲವನ್ನು ಸಮಿತಿ ಕಂಡುಕೊಂಡು ಮಾದರಿಯಾಗಿ ಬೆಳೆಯಬೇಕೆಂದು ಎಂದು ಕರೆ ನೀಡಿದರು,

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬಿಜೆಪಿ ಮುಖಂಡ್ಷ ಪ್ರಮೋದ್ ದುಂಡುಗ, ಮಂಜು ಪಟೇಲ್, ಸುನೀಲ್ ನಿಡಗೋಡು, ಲಕ್ಷಣಗೌಡ ಬಾಳೂರು, ಪುಟ್ಟಣ್ಣ ಪಟ್ಟದೂರು, ಅದರ್ಶ ಕೊಟ್ಟಿಗೆಹಾರ, ಮಾಜಿ ಅಧ್ಯಕ್ಷ ಸುಂದ್ರೇಶ್ ಕುಂದೂರು, ಸದಸ್ಯರಾದ ಮಹೇಶ್, ರವೀಂದ್ರ ಬಾಳೆಗದ್ದೆ, ಶಿವೇಗೌಡ ವಾಲೇಕರಟಿ, ಭೈರಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News