ಮಿಸ್ಬಾ ದಾಖಲೆ ಮುರಿದ ವಿರಾಟ್ ಕೊಹ್ಲಿ

Update: 2018-10-13 19:11 GMT

ಹೈದರಾಬಾದ್, ಅ.13: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನ ಮೊದಲ ಇನಿಂಗ್ಸ್‌ನಲ್ಲಿ 45 ರನ್ ಗಳಿಸುವುದರೊಂದಿಗೆ ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾವುಲ್ ಹಕ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.

 ಕೊಹ್ಲಿ ನಾಯಕನಾಗಿ ಟೆಸ್ಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಏಶ್ಯದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

     ಮಿಸ್ಬಾ ನಾಯಕರಾಗಿ 56 ಟೆಸ್ಟ್ ಪಂದ್ಯಗಳಲ್ಲಿ 51.39 ಸರಾಸರಿಯಂತೆ 4,214 ರನ್ ಗಳಿಸಿದ್ದರು. ಕೊಹ್ಲಿ 42 ಟೆಸ್ಟ್ ಪಂದ್ಯಗಳಲ್ಲಿ 65.12 ಸರಾಸರಿಯಂತೆ 4,233 ರನ್ ದಾಖಲಿಸಿದ್ದಾರೆ. ಕೊಹ್ಲಿ 69 ಇನಿಂಗ್ಸ್ ಗಳಲ್ಲಿ 17 ಶತಕ ಮತ್ತು 9 ಅರ್ಧಶತಕ ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕದ ಗ್ರೇಮ್ ಸ್ಮಿತ್ 109 ಪಂದ್ಯಗಳಲ್ಲಿ 8659 ರನ್, ಆಸ್ಟ್ರೇಲಿಯದ ಆ್ಯಲನ್ ಬಾರ್ಡರ್ 93 ಪಂದ್ಯಗಳಲ್ಲಿ 6,623 ರನ್ ಮತ್ತು ಆಸ್ಟ್ರೇಲಿಯದ ರಿಕಿ ಪಾಂಟಿಂಗ್ 77 ಪಂದ್ಯಗಳಲ್ಲಿ 6,542 ರನ್ ಗಳಿಸಿದ್ದಾರೆ. ಗರಿಷ್ಠ ರನ್ ಗಳಿಸಿದ ಭಾರತದ ನಾಯಕರ ಪೈಕಿ ಮಹೇಂದ್ರ ಸಿಂಗ್ ಧೋನಿ 60 ಪಂದ್ಯಗಳಲ್ಲಿ 3,454 ರನ್ ಗಳಿಸಿ ಎರಡನೇ , ಸುನೀಲ್ ಗವಾಸ್ಕರ್ 47 ಪಂದ್ಯಗಳಲ್ಲಿ 3,449 ರನ್ ದಾಖಲಿಸಿ ಗರಿಷ್ಠ ರನ್ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News