ಜನರು ಸರ್ಕಾರದ ಯೋಜನೆಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು: ಸಂಸದ ಜಿ.ಎಂ.ಸಿದ್ದೇಶ್

Update: 2018-10-14 18:30 GMT

ಹರಪನಹಳ್ಳಿ,ಅ.14: ಜನರು ಸರ್ಕಾರದ ಯೋಜನೆಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ ಸಲಹೆ ನೀಡಿದರು.

ತಾಲೂಕಿನ ಕಸವಹಳ್ಳಿ ಗ್ರಾಮದಲ್ಲಿ ರವಿವಾರ  ಆಯೋಜಿಸಲಾಗಿದ್ದ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಸಹಯೋಗದೊಂದಿಗೆ ಇಂದಿರಾಗಾಂಧಿ ವಸತಿ ಶಾಲಾ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ಬಾಗವಹಿಸಿ ಮಾತನಾಡಿದರು.

ಕಸವಹಳ್ಳಿ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಂದಿರಾಗಾಂಧಿ ವಸತಿ ಶಾಲೆ ಎರಡು ವರ್ಷಗಳಿಂದ ವಿಧ್ಯಾರ್ಥಿಗಳು ಚಿಗಟೆರೆ ಗ್ರಾಮದಲ್ಲಿರುವ ವಸತಿ ಶಾಲೆ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇನ್ನು ಮುಂದಿನದಿನಗಳಲ್ಲಿ ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡ ಶಂಕುಸ್ಥಾಪನೆ ಅಡಿಗಲ್ 16.50 ಲಕ್ಷಗಳು ರು. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದರು. 

ಶಾಸಕ ಜಿ. ಕರುಣಾಕರ ರೆಡ್ಡಿ ಮಾತನಾಡಿ, ತಾಲೂಕಿ ಹಲವಾಗಲು ಗ್ರಾಮದಲ್ಲಿ ಅಟಲ್ ಬಿಹಾರ ವಾಜಪಯಿ ಮೂರಾರ್ಜಿ ವಸತಿ ಶಾಲೆಗೆ 3. ಕೋಟಿ ರು.ಅನುಧಾನದಲ್ಲಿ ಅಡಿಗಲ್ ಹಾಕಿದ್ದೆವೆ ಹೆಚ್ ಕೆ ಡಿ ಪಿ ಯೋಜನೆ ಅಡಿಯಲ್ಲಿ ತಾಲೂಕಿನ ಎಲ್ಲಾ ವಿಧ್ಯಾರ್ಥಿಗಳ ಹಾಸ್ಟಲ್ ಸೌಲಭ್ಯಕ್ಕಾಗಿ 30 ಕೋಟಿ ರೂ. ಹಾಗೂ 12 ಅಂಗನವಾಡಿ ಕೇಂದ್ರಗಳನ್ನು ಸರ್ಕಾರಕ್ಕೆ ಪ್ರಸ್ಥಾವನೆಗೆ ಸಲ್ಲಿಸಿದ್ದೆನೆ ಎಂದರು.

ಶಾಸಕನಾಗಿ ಆಯ್ಕೆಯಾದ ಮೇಲೆ ತಾಲೂಕಿನಲ್ಲ ಒಟ್ಟು 70 ಬೋರ್ ವೇಲ್ ಕೋರೆಸಿದ್ದೇನೆ. ಅದರಲ್ಲಿ ಎರಡರಿಂದ ಮೂರು ಬಿಟ್ಟರೆ ಇನ್ನು ಉಳಿದ ಎಲ್ಲಾ ಭಾಗದಲ್ಲಿ ಕುಡಿಯಲಿಕ್ಕೆ ನೀರು ಅನುಕೂಲವಾಗಿದೆ. ನೀರನ್ನು ಮಿತವಾಗಿ ಬಳಸಬೇಕು ಅಂತರ್ ಜಲ ಕುಸಿಯುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಾಗುತ್ತದೆ. ಆದ್ದರಿಂದ ನೀರನ್ನು ಸದ್ಬಳಿಕೆ ಮಾಡಿಕೋಳ್ಳಬೇಕು ಎಂದು ವಿಶ್ಲೇಷಿಸಿದರು. 

ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ಹಿಂದೆ ಇದ್ದ ಕಾಂಗ್ರೆಸ್ ಶಾಸಕರು ಯಾವುದೇ ರೀತಿ ಅಭಿವೃದ್ದಿ ಕೆಲಸ ಮಾಡದೆ ಬರೇ ಸುಳ್ಳು ಭರವಸೆಯಿಂದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿಹೋಗುದ್ದಾರೆ. ನಮ್ಮ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕು ಹರಪನಹಳ್ಳಿ ತಾಲೂಕು ಹಾಗೂ ಜಗಳೂರು ತಾಲೂಕು ಬರಗಾಲ ಪೀಡಿತ ತಾಲೂಕು ಆದ್ದರಿಂದ ಈ ತಾಲೂಕಿನಲ್ಲಿ ಕೇರೆಗಳಿಗೆ ನೀರು ತುಂಬಿಸಿದರೆ ರೈತರು ಅಲ್ಪಸ್ವಲ್ಪ ನೀರಾವರಿ ಮಾಡಿಕೋಳ್ಳುವದಕ್ಕೆ ಅನುಕುಲವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲ ಮಾತನಾಡಿದರು, ಕಸವನಹಳ್ಳಿ ಗ್ರಾಮ. ಅಧ್ಯಕ್ಷ ಪರಶುರಾಮ್, ಜಿ.ಪಂ ಉಪಾದ್ಯಕ್ಷೆ ರಶ್ಮಿ ರಾಜಪ್ಪ, ತಾ.ಪಂ.ಉಪಾಧ್ಯಕ್ಷ ಮಂಜ್ಯಾನಾಯ್ಕ, ಪುರಸಭೆ ಅಧ್ಯಕ್ಷ ಹೆಚ್. ಕೆ. ಹಾಲೇಶ್, ಉಪಾಧ್ಯಕ್ಷ ಸತ್ಯನಾರಯಣ್, ಜಿಲ್ಲಾ ಉಪಾದ್ಯಕ್ಷ ಎಂ.ಪಿ.ನಾಯ್ಕ, ತಾಲೂಕು ಬಿಜೆಪಿ ತಾ.ಅಧ್ಯಕ್ಷ ಕೆ. ಲಕ್ಷ್ಮಣ್, ಉಪಾಧ್ಯಕ್ಷ ಕಣವಿಹಳ್ಳಿ ಮಂಜುನಾಥ್, ಮುಖಂಡರಾದ ಸಣ್ಣ ಹಾಲಪ್ಪ, ಲೊಕೇಶ್, ವೈ.ಕೆ.ಬಿ. ದುರಗಪ್ಪ, ತಾ.ಸದಸ್ಯ ಪ್ರಕಾಶ್, ನಾಗರಾಜ್, ಬೆನಹಳ್ಳಿ ರೇವಣ್ಣ, ಕರಿಗೌಡ್ರು, ಸಂತೋಷ್, ನಾಗರಾಜ್, ಸವಿತ ಮಲ್ಲಿಕಾರ್ಜುನ್, ಸತ್ತೂರ್ ಹಾಲಪ್ಪ, ತಿಮ್ಮಣ್ಣ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News