ಹನೂರು : ನಡುರಸ್ತೆಯಲ್ಲೇ ಬಿದ್ದಿದೆ ಲಕ್ಷಾಂತರ ರೂ. ಮೌಲ್ಯದ ತೇಗದ ಮರ

Update: 2018-10-14 18:35 GMT

ಚಾಮರಾಜನಗರ,ಅ.14:  ಅನುಮತಿ ಇಲ್ಲದ ಲಕ್ಷಾಂತರ ರೂ. ಮೌಲ್ಯದ ತೇಗದ ಮರ ಕಳೆದ 3 ದಿನಗಳಿಂದ ನಡುರಸ್ತೆಯಲ್ಲೇ ಬಿದ್ದಿದ್ದರೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿರುವ ಆರೋಪ ಕೇಳಿಬಂದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಸಮೀಪದ ದೊಡ್ಡಸಂಪಿಗೆ ದೇವಾಲಯದ ಬಳಿ ಟಿಂಬರ್ ವ್ಯಾಪಾರಿಯೊರ್ವರು ಜಮೀನೊಂದರಲ್ಲಿ 3 ಬೇವಿನ ಮರಕ್ಕೆ ಪರ್ಮಿಟ್ ಪಡೆದು, ಪಕ್ಕದ ಜಮೀನಿನ 5 ಕ್ಕೂ ಹೆಚ್ಚು ತೇಗದ ಮರಗಳಿಗೆ ಕತ್ತರಿ ಹಾಕಿದ್ದು,. ಈ ವಿಚಾರ ತಿಳಿದು ಗ್ರಾಮಸ್ಥರು ಜಮಾಯಿಸುತ್ತಿದ್ದಂತೆ, ತೇಗದ ಮರದ ತುಂಡುಗಳನ್ನು ರಸ್ತೆಯಲ್ಲೇ ಬಿಟ್ಟು ಆತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಹೀಗಾಗಿ ನಡು ರಸ್ತೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ತೇಗದ ಮರಗಳು ಬಿದ್ದಿದ್ದರೂ ದೂರು ಪಡೆಯಲು ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಸ್ಥಳೀಯರಾದ ಹನುಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News