ತುಮಕೂರು ಬ್ರ್ಯಾಂಚ್ ಕಾಲುವೆ ಸಾಮರ್ಥ್ಯ ಹೆಚ್ಚಿಸಲು ಆಗ್ರಹಿಸಿ ಅ.26ರಂದು ಧರಣಿ

Update: 2018-10-14 18:40 GMT

ತುಮಕೂರು,ಅ.14: ಹೇಮಾವತಿ ಲಿಂಕಿಂಗ್ ಅಥವಾ ಎಕ್ಸ್‍ಪ್ರೆಸ್ ಕೆನಾಲ್ ನಿರ್ಮಾಣ ಮಾಡುವುದರ ವಿರುದ್ಧ ಹಾಗೂ ತುಮಕೂರು ಬ್ರ್ಯಾಂಚ್ ಕಾಲುವೆ ಸಾಮರ್ಥ್ಯ ಹೆಚ್ಚಿಸಲು ಆಗ್ರಹಿಸಿ ಅ.26 ರಂದು ಗುಬ್ಬಿ ತಾಲ್ಲೂಕು ನಿಟ್ಟೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಷ್ಟೊರೊಳಗೆ ಸರ್ಕಾರ ಈ ಯೋಜನೆ ಕೈ ಬಿಡುವುದಾಗಿ ಘೋಷಿಸಬೇಕು, ಇಲ್ಲವಾದರೆ ಯಾವುದೇ ಅಹಿತರ ಘಟನೆ ನಡೆದಲ್ಲಿ ಸರ್ಕಾರವೇ ನೇರಹೊಣೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುಮಕೂರು ನಾಲೆಯಲ್ಲಿ ನೀರಿನ ಹರಿಯುವಿಕೆ ಮತ್ತು ಕಲುವೆಯಲ್ಲಿ ಮರಗಿಡ ಬೆಳೆದು ನೀರು ಹರಿಯಲು ಇರುವ ಅಡೆತಡೆ ಬಗ್ಗೆ ಪರಿಶೀಲನೆ ನಡೆಸಿ ತಾತ್ಕಾಲಿಕ ಪರಿಹಾರ ಹಾಗೂ ತುಮಕೂರು ಕಾಲುವೆ ಸಾಮರ್ಥ್ಯ ಹೆಚಿಸುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ, ಉಳಿದೆಲ್ಲ ಹೇಳಿಕೆಗಳಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಮಾವತಿ ನೀರನ್ನು ಸಾಮಾಜಿಕ ನ್ಯಾಯಡಿ ಹಂಚಿಕೆ ಮಾಡಲು ನೀರ್‍ಗಂಟಿ ಜವಾಬ್ದಾರಿ ನೀಡುವುದಾದರೆ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಲು ಸಿದ್ಧನಿದ್ದೇನೆ. ಬೀಗದ ಕೀ ಪಡೆಯಲು ಎಲ್ಲಿಗೆ ಬರಬೇಕು ಸ್ವಾಮಿ, ಹಾಸನ ಜಿಲ್ಲೆಯ ಹಳೇಬಿಡು ಏತ ನೀರಾವರಿ ಯೋಜನೆಯೂ ಸೇರಿದಂತೆ ಮೂರು ಜಿಲ್ಲೆಗಳಿಗೂ ನೀರಿನ ಹಂಚಿಕೆಯಲ್ಲಿ ಸಮಪಾಲು ನೀಡಲು ಬದ್ಧನಿದ್ದೇನೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಮರು ಸವಾಲು ಹಾಕಿದ್ದಾರೆ.

ಸಚಿವರು ಹೇಳಿರುವಂತೆ ತುಮಕೂರು ಹೇಮಾವತಿ ನಾಲೆಯ ಸಾಮಥ್ರ್ಯ 1445 ಕ್ಯುಸೆಕ್ಸ್ ಇದ್ದರೂ 700 ಕ್ಯುಸೆಕ್ಸ್ ನೀರು ಮೇಲೆ ಬಿಡುವುದು ಬೇಡ ಎಂದು ಮಖ್ಯ ಇಂಜಿನಿಯರ್ ತಿಳಿಸಿದ್ದಾರೆ ಎಂದು ಸತ್ಯ ಹೇಳಿರುವುದಕ್ಕೆ ಅಭಿನಂದಿಸುತ್ತೇನೆ ಎಂದ ಬಸವರಾಜು ತುಮಕೂರು ನಾಲೆಗೆ 96 ದಿನಗಳ ಕಾಲ ದಿನಕ್ಕೆ 700 ಕುಸೆಕ್ಸ್‍ನಂತೆ 6 ಟಿಎಂಸಿ ನೀರು ಹರಿದಿಲ್ಲ, ಆದರೆ ಸಚಿವರು ತುಮಕೂರು ನಾಲೆಗೆ 14 ಟಿಎಂಸಿ ನೀರು ಹರಿದಿದೆ ಎಂದು ಹೇಳಿರುವುದು ಶುದ್ದಸುಳ್ಳೆ? ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಎಂಎಲ್‍ಸಿ ಹುಲಿನಾಯ್ಕರ್, ಕುಂದರನಹಳ್ಳಿ ರಮೇಶ್, ಹೆಬ್ಬಾಕ ರವಿ, ಶಿವಕುಮಾರ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News