ವಿಶ್ವದಾಖಲೆ ಸೇರಲಿರುವ ನಾಗ್ಪುರ ಕಿಚಡಿ !

Update: 2018-10-15 03:40 GMT

ನಾಗ್ಪುರ, ಅ.15: ಮಹಾರಾಷ್ಟ್ರದ ಖ್ಯಾತ ಶೆಫ್ ವಿಷ್ಣು ಮನೋಹರ್ 3000 ಕೆ.ಜಿ. ಕಿಚಡಿಯನ್ನು ಒಂದೇ ಪಾತ್ರೆಯಲ್ಲಿ ಸಿದ್ಧಪಡಿಸುವ ಮೂಲಕ ಗಿನಿಸ್ ದಾಖಲೆ ಸೇರಲು ಸಜ್ಜಾಗಿದ್ದಾರೆ. ಅ.16 ವಿಶ್ವ ಆಹಾರ ದಿನವಾಗಿರುವ ಹಿನ್ನೆಲೆಯಲ್ಲಿ ಈ ವಿಶಿಷ್ಟ ಅಡುಗೆ ತಯಾರಿಸಿದ್ದಾರೆ.

"ವಿಶ್ವದಾಖಲೆ ನಿರ್ಮಿಸಲು ನಾನು ಯತ್ನಿಸುತ್ತಿದ್ದೇನೆ. ಇದರ ಹಿಂದಿರುವ ಉದ್ದೇಶ, ಕಿಚಡಿಯನ್ನು ರಾಷ್ಟ್ರೀಯ ಖಾದ್ಯವಾಗಿ ಘೋಷಿಸಬೇಕು ಎನ್ನುವುದು. ಇದು ಅತ್ಯಂತ ಆರೋಗ್ಯಕರ ಮತ್ತು ಅಗ್ಗದ ಆಹಾರ" ಎಂದು ವಿಷ್ಣು ಮನೋಹರ್ ಹೇಳಿದರು.

"3000 ಕೆಜಿ ಕಿಚಡಿಯನ್ನು ಒಂದೇ ಪಾತ್ರೆಯಲ್ಲಿ ತಯಾರಿಸಲು 275 ಕೆಜಿ ಅಕ್ಕಿ, 125 ಕೆಜಿ ಹೆಸರು ಬೇಳೆ, 150 ಕೆಜಿ ಕಡಲೆ, 3000 ಲೀಟರ್ ನೀರು ಹಾಗೂ 150 ಕೆ.ಜಿ. ತುಪ್ಪ ಬಳಸಲಾಗಿದೆ" ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಪಾಕಶಾಲೆಗೆ ತೆರಳಿ ಮನೋಹರ್ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

"ಈ ಖ್ಯಾತ ಶೆಫ್‌ನ ಸಾಧನೆಯನ್ನು ನಾನು ಶ್ಲಾಘಿಸುತ್ತೇನೆ. ಭಾರತೀಯ ಖಾದ್ಯವನ್ನು ವಿಶ್ವವಿಖ್ಯಾತಿಗೊಳಿಸಲು ಅವರು ಮುಂದಾಗಿದ್ದಾರೆ. ಅವರ ಕಾರ್ಯ ಅಮೋಘ. ಅವರು ಸಿದ್ಧಪಡಿಸಿರುವ ಮಸಾಲಾ ಕಿಚಡಿ ಅತ್ಯಂತ ರುಚಿಕರ" ಎಂದು ಗಡ್ಕರಿ ಬಣ್ಣಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ನವದೆಹಲಿಯಲ್ಲಿ 918 ಕೆಜಿ ಕಚಡಿ ಸಿದ್ಧಪಡಿಸಿದ್ದು, ಗಿನಿಸ್ ದಾಖಲೆಯಾಗಿದೆ. ಸೆಲೆಬ್ರಿಟಿ ಶೆಫ್ ಸಂಜೀವ್ ಕಪೂರ್ ಇದನ್ನು ಸಿದ್ಧಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News