ಚೀನಾದಿಂದ ಆಮದು ಮಾಡಿದ ಮೊಬೈಲ್ ಬಿಡಿಭಾಗಗಳ ಪ್ರಮಾಣ 9.4 ಬಿಲಿಯನ್ ಡಾಲರ್ ಗೆ ಏರಿಕೆ

Update: 2018-10-16 10:01 GMT

ಹೊಸದಿಲ್ಲಿ, ಅ.16: ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ವರ್ಷವಾದ 2014ರಲ್ಲಿ ಭಾರತ ಚೀನಾದಿಂದ ಆಮದು ಮಾಡಿದ ಮೊಬೈಲ್ ಫೋನ್ ಬಿಡಿಭಾಗಗಳು ಹಾಗೂ ಟೆಲಿಕಾಂ ಸಾಧನಗಳ ಆಮದು  ಪ್ರಮಾಣ 1.3 ಬಿಲಿಯನ್ ಡಾಲರ್‍ನಿಂದ 9.4 ಬಿಲಿಯನ್ ಡಾಲರ್ ಗೆ ಏರಿದೆ. ಇದೇ ಅವಧಿಯಲ್ಲಿ ಮೊಬೈಲ್ ಫೋನ್  ಹಾಗೂ  ಟೆಲಿಕಾಂ ಬಿಡಿಭಾಗಗಳ ಆಮದು 7.6 ಬಿಲಿಯನ್ ಡಾಲರ್‍ನಿಂದ 12.7 ಡಾಲರ್‍ಗೆ ಏರಿಕೆಯಾಗಿದೆ. ಇದು ‘ಮೇಕ್ ಇನ್ ಇಂಡಿಯಾ’ಗೆ ತೀವ್ರ ಹಿನ್ನಡೆ ಎನ್ನಲಾಗಿದೆ.

ಇದೇ ಅವಧಿಯಲ್ಲಿ ಭಾರತ ಚೀನಾದಿಂದ 6.3 ಬಿಲಿಯನ್ ಮೌಲ್ಯದ  ಮೊಬೈಲ್ ಫೋನುಗಳನ್ನು ಆಮದು ಮಾಡಿಕೊಂಡಿದ್ದರೆ, 2017ರಲ್ಲಿ 3.3 ಬಿಲಿಯನ್ ಡಾಲರ್ ಮೌಲ್ಯದ ಮೊಬೈಲ್ ಫೋನುಗಳನ್ನು ಆಮದು ಮಾಡಲಾಗಿದೆಯೆಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ವರದಿ ತಿಳಿಸಿದೆ.

ಈ ಅವಧಿಯಲ್ಲಿ ಚೀನಾದಿಂದ ಬಿಡಿ ಭಾಗಗಳು ಭಾರತಕ್ಕೆ ಬಂದು  ಇಲ್ಲಿ  ಅವುಗಳನ್ನು ಜೋಡಣೆ ಮಾಡುವ ಕಾರ್ಯ ನಡೆಸಲಾಗುತ್ತಿರುವುದೇ ಆಗಿರುವ ಬದಲಾವಣೆ ಎಂದು ವರದಿ ತಿಳಿಸುತ್ತದೆ. ಮೊಬೈಲ್ ಫೋನುಗಳು ಭಾರತದಲ್ಲಿ ತಯಾರಾಗುತ್ತಿದ್ದರೂ ಅವುಗಳ ಬಿಡಿ ಭಾಗಗಳೆಲ್ಲಾ ಚೀನಾದಿಂದ ಆಮದು ಮಾಡಲ್ಪಟ್ಟವು ಎಂಬುದು ವಾಸ್ತವ.

ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಿಕಾ ದೇಶವಾಗಿದೆ ಎಂದು ಇಂಡಿಯನ್ ಸೆಲ್ಯುಲರ್ ಅಸೋಸಿಯೇಶನ್ ಟೆಲಿಕಾಂ ಮತ್ತು ಐಟಿ  ಸಚಿವಾಲಯಕ್ಕೆ ಈ ವರ್ಷ ತಿಳಿಸಿದೆ. 2019ರೊಳಗಾಗಿ ಭಾರತದಲ್ಲಿ 50 ಮಿಲಿಯನ್ ಮೊಬೈಲ್ ಫೋನ್ ತಯಾರಿಸುವ ಗುರಿಯನ್ನು ಸರಕಾರ ಹೊಂದಿತ್ತು. ಅದನ್ನೀಗ 2025ರೊಳಗಾಗಿ 1 ಬಿಲಿಯನ್ ಯುನಿಟ್ ಎಂದು ಪರಿಷ್ಕರಿಸಲಾಗಿದೆ. ಆದರೆ ವಿದೇಶಗಳಿಂದ ಆಮದಾದ ಬಿಡಿ ಭಾಗಗಳನ್ನು ಅಂತಿಮವಾಗಿ ಇಲ್ಲಿ ಅಸೆಂಬಲ್ ಮಾಡಿ ಉತ್ಪನ್ನ ತಯಾರಿಸುವ ಮೂಲಕವಷ್ಟೇ ಈ ಗುರಿ ಸಾಧಿಸಲು ಪ್ರಯತ್ನಿಸಲಾಗುವುದು ಎಂಬುದು ವಾಸ್ತವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News