ಲೈಂಗಿಕ ಕಿರುಕುಳ ಆರೋಪ: ಎನ್ ಎಸ್ ಯುಐ ಅಧ್ಯಕ್ಷ ರಾಜೀನಾಮೆ

Update: 2018-10-16 10:32 GMT

ಹೊಸದಿಲ್ಲಿ, ಅ.16: ತನ್ನ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದ ನಂತರ ಎನ್ ಎಸ್ ಯುಐ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಫೈರೋಝ್ ಖಾನ್ ರಾಜೀನಾಮೆ ನೀಡಿದ್ದಾರೆ.

ಛತ್ತೀಸ್ ಗಢದ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ ನಂತರ ಜಮ್ಮು ಕಾಶ್ಮೀರದ ಫೈರೋಝ್ ಕಾಂಗ್ರೆಸ್ ವಿದ್ಯಾರ್ಥಿ ವಿಂಗ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಕರಣದ ಬಗ್ಗೆ ಪರಿಶೀಲಿಸಲು ಕಾಂಗ್ರೆಸ್ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News